ಟೀಕೆ ಇಲ್ಲದೆ ರಾಜಕಾರಣ ಮಾಡಲು ಸಾಧ್ಯನಾ?
ಟೀಕೆ ಎನ್ನುವುದು ಇದ್ದಾಗ ಮಾತ್ರ ಯಾವುದೇ ತಪ್ಪು ಕೆಲಸ ಸರಿ ಮಾಡಲು ಸಾಧ್ಯ. ಆದರೆ ಅದು ಉದ್ದೇಶ ಪೂರಕವಾಗಿ ನಂಜು ಮಿಶ್ರಿತ ಅಥವಾ ಕಾರಣವಿಲ್ಲದೆ ಟೀಕೆ ಮಾಡುವ ಉದ್ದೇಶ ಹೊಂದಿರಬಾರದು. ನಮ್ಮ ಹಿತವನ್ನು ಬಯಸುವವರು ಹೆಚ್ಚಾಗಿ ಟೀಕೆ ಮಾಡುತ್ತಾ ಇರುತ್ತಾರೆ. ಉದಾ ಮನೆಯಲ್ಲಿ ತಂದೆ ತಾಯಿ ಅಕ್ಕ, ಅಣ್ಣ ತಂಗಿಯಾರೂ ಯಾವುದೇ ಕೆಲಸ ಮಾಡುವಾಗ ಅದು ಆಗಾಯಿತು, ಹೀಗಾಯಿತು, ಸರಿ ಇಲ್ಲ ಎಂದು ಹೇಳುತ್ತಾರೆ. ಆದರೆ ಅದರ ಉದ್ದೇಶ ಸರಿ ಮಾಡುವುದು, ಬೆಳೆಯುವುದು ಆಗಿರುತ್ತದೆ. ಇದನ್ನು ಟೀಕೆ, ಬೈಯಿಗಳು ಎಂದು ಭಾವಿಸಿದರೆ ನಮಗೆ ನಷ್ಟ.
ಟೀಕೆಯಿಂದ ಹೆಚ್ಚು ಬೆಳೆಯುವುದಕ್ಕೆ, ಹೆಚ್ಚು ಸರಿ ಮಾಡಲು ಅವಕಾಶ ದೊರೆಯುತ್ತದೆ. ಹಾಗಾಗಿ ಪ್ರಧಾನಿ ಯಾಗಿರಲಿ, ಮುಖ್ಯ ಮಂತ್ರಿಯಾಗಿರಲಿ ಟೀಕೆ ಎನ್ನುವುದು ಇದ್ದಾಗ ಮಾತ್ರ ಹೆಚ್ಚು ಬೆಳವಣಿಗೆ ಕಾಣಲು ಸಾಧ್ಯ. ಆದರೆ ಸುಮ್ಮನೆ ಟೀಕೆ ಮಾಡುವ ಉದ್ದೇಶ ಆಗಬಾರದು. ಸರಿಯಾದ ಕಾರಣ ತಿಳಿಸಿ ಟೀಕೆ ಮಾಡಿದಾಗ ಮಾತ್ರ ಆ ಟೀಕೆಗೆ ಬೆಲೆ.
ಟೀಕೆ ಮಾಡಿದರೆ ಅವರ ವಿರೋಧಿ ಎಂದು ಬಿಂಬಿಸಿ ಟೀಕೆ ಮಾಡದಂತೆ ಮಾಡುವುದು ಸರಿ ಅಲ್ಲ. ಆ ಟೀಕೆ ಹೆಚ್ಚು ಒಳ್ಳೆ ಕೆಲಸ ಮಾಡಲು ಪ್ರೇರಣೆ ಆಗಬೇಕು. ಯಾವುದೇ ಅಂಧ ಅಭಿಮಾನ, ಲಾಭ, ಜಾತಿ, ಧರ್ಮ, ಸ್ನೇಹಿತ, ಬಂಧು, ದೊಡ್ಡ ಜನ ಎಂದು ಹೇಳಿ ಪ್ರತಿಯೊಂದನ್ನು ನೋಡಿ ಟೀಕೆ ಮಾಡದೇ ಇರುವುದರಿಂದ ತಪ್ಪುಗಳು ಬೆಳೆಯುತ್ತಾ ಹೋಗುತ್ತದೆ. ಹೆಚ್ಚಿನವರಿಗೆ ಟೀಕೆಯನ್ನು ಸಹಿಸಲು ಆಗುವುದಿಲ್ಲ. ಆದರೆ ಯಾಕಾಗಿ ಟೀಕೆ ಎನ್ನುವುದನ್ನು ಸ್ಪಷ್ಟ ಪಡಿಸಿದಾಗ ಆ ಟೀಕೆ ಸ್ವೀಕಾರಕ್ಕೆ ಅರ್ಹತೆ ಹೊಂದಿರುತ್ತದೆ.
ಒಂದು ಸರಕಾರವನ್ನು ಟೀಕೆ ಮಾಡುವ ಹಕ್ಕನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ. ಯಾಕೆಂದರೆ ಅಲ್ಲಿರುವುದು ಎಲ್ಲಾರ ತೆರಿಗೆ ದುಡ್ಡು, ಎಲ್ಲಾರ ವೋಟು, ಎಲ್ಲಾರ ಹಕ್ಕು. ಇದನ್ನು ಸರಿ ಮಾಡುವ ಜವಾಬ್ದಾರಿ ಎಲ್ಲರೂ ಹೊಂದಿದ್ದಾರೆ.ಪ್ರತಿಯೊಂದನ್ನು ಹೊಗಳುತ್ತಾ ಇರುವವರು ಒಂದಾ ಆ ಪಕ್ಷದ ಎಜೇಂಟ್ ಆಗಿ ದುಡ್ಡಿನ ಆಸೆ ಹೊಂದಿದವಾರಾಗಿರುತ್ತಾರೆ ಅಥವಾ ಅಂಧಾ ಅಭಿಮಾನ ಬೆಳೆಸಿದವರು ಆಗಿರುತ್ತಾರೆ. ಯಾವುದೇ ವ್ಯಕ್ತಿ, ಪಕ್ಷ, ನಾಯಕ ದೇವಲೋಕದಿಂದ ಸೃಷ್ಟಿ ಮಾಡಿದವರು ಆಗಿರುವುದಿಲ್ಲ. ಯಾವುದೋ ಉದ್ದೇಶ ಇಟ್ಟು ಅಧಿಕಾರ ತಮ್ಮ ಕಂಟ್ರೋಲ್ ಇರುವಂತೆ ಮಾಡಲು ರಾಜಕೀಯ ಆಟ ಇರುವವರೆಗೂ ಟೀಕೆ ಇದ್ದೆ ಇರುತ್ತದೆ. ಟೀಕೆ ಹೋಗಬೇಕಾದರೆ ರಾಜಕೀಯ ಹೋಗಬೇಕು, ಅಧಿಕಾರ ಎಲ್ಲರ ಕೈಗೆ ಬರಬೇಕು, ಸಂಪತ್ತು ಹಂಚುವಂತೆ ಮಾಡಬೇಕು, ಗೌರವ ಎಲ್ಲಾರಿಗೂ ದೊರೆಯುವಂತೆ ಆಗಬೇಕು. ನ್ಯಾಯ, ಅನ್ಯಾಯದ ಆಧಾರದಲ್ಲಿ ಸಮಾಜದಲ್ಲಿ ವ್ಯತ್ಯಾಸ ಕಾಣುವಂತೆ ಆಗಬೇಕು. ಆಗ ಮಾತ್ರ ಟೀಕೆ ಇಲ್ಲದೆ ಆಡಳಿತ ನಡೆಸಲು ಸಾಧ್ಯ.