90% ಜನಕ್ಕೆ ಸ್ವಂತ ಬುದ್ದಿಯೇ ಇಲ್ಲ!
ನಮ್ಮ ದೇಶದಲ್ಲಿ ಸುಮಾರು 90% ಜನರ ಭಾವನೆ ಬೇರೆಯವರ ಪ್ರಭಾವದಿಂದಲೇ ವ್ಯಕ್ತವಾಗುತ್ತದೆ. ಪುಸ್ತಕ, ಭಾಷಣ, ವಿಡಿಯೋ, ಸಿನಿಮಾ, ಚರಿತ್ರೆ, ಕಥೆ ಮುಂತಾದ ಪ್ರಭಾವ ಕ್ಕೆ ಒಳಗಾಗಿ ತಮ್ಮ ಭಾವನೆ ರೂಪುಗೊಂಡಿರುತ್ತದೆ. ಇದು ಸಹಜ ಆದರೆ ರಾಜಕೀಯ ಲಾಭಕ್ಕಾಗಿ ನಮ್ಮ ಭಾವನೆಯ ದುರುಪಯೋಗವಾಗದಂತೆ ಜಾಗೃತೆ ವಹಿಸಬೇಕಿದೆ. ಇದರಿಂದ ನಿಜವಾದ ಸತ್ಯ ಮರೆಮಾಚಿ ಅನ್ಯಾಯ ಹೆಚ್ಚಾಗಲೂ ದಾರಿಯಾಗುತ್ತದೆ.ಯಾವುದೇ ಭಾಷಣ, ಕಥೆ, ಸಿನಿಮಾ, ವಿಡಿಯೋ ಮನರಂಜನೆಯ ಭಾಗವಾಗಿರಲಿ, ಆದರೆ ಅದರ ವಿಚಾರ ಸ್ವೀಕಾರ ಮಾಡುವ ಮೊದಲು ಸ್ವಂತ ಬುದ್ಧಿ ಉಪಯೋಗಿಸಿ, ಸರಿ ತಪ್ಪು ವಿಮರ್ಶೆ ಮಾಡಿ, ನಿರ್ಧಾರ ಮಾಡುವಂತೆ ಇರಬೇಕು. ಇಲ್ಲದಿದ್ದರೆ ಭಾವನಾತ್ಮಕ ಮುರ್ಖತನ ಮಾಡಿ ದುರುಪಯೋಗ ಮಾಡುವುದಕ್ಕೆ ದಾರಿಯಾಗುತ್ತದೆ. ಉದಾ :ಧರ್ಮ, ದೇವರು, ದೇಶ ಪ್ರೇಮ ಎನ್ನುವ ವಿಚಾರದಲ್ಲಿ ತುಂಬಾ ದುರುಪಯೋಗ ನಡೆಯುತ್ತಿದೆ. ಇದನ್ನು ತಿಳಿದು ಧರ್ಮ, ದೇವರು, ದೇಶ ಭಕ್ತಿ ಬೆಳೆಯಬೇಕು.ಕೇವಲ ಒಂದು ಪಕ್ಷ, ನಾಯಕನಿಗೆ ಬೆಂಬಲವಾಗಿ ನಿಂತವರು ಮಾತ್ರ ದೇಶ ಭಕ್ತರು, ಧರ್ಮ ರಕ್ಷಕರು ಎನ್ನುವ ಬಿರುದು ಪಡೆದು ವೋಟು ಗಿಟ್ಟಿಸುವ ರಾಜಕೀಯ ತಂತ್ರಗಾರಿಕೆಗೆ ನಮ್ಮ ಭಾವನೆ ದುರುಪಯೋಗ ಆಗುತ್ತದೆ. ಇದರಿಂದ ಸ್ವಾಭಿಮಾನ ನಾಶವಾಗಿ ಗುಲಾಮ ಪದ್ಧತಿ ಬೆಳೆದು ನಿಜವಾದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ನಾಶವಾಗುತ್ತದೆ. ಇದರಿಂದ ಬಡವ ಶ್ರೀಮಂತ ಎನ್ನುವ ಅಂತರ, ಜಾತಿ ವ್ಯವಸ್ಥೆ, ಅಸಮಾನತೆ ಹೆಚ್ಚು ಹೆಚ್ಚು ಬಲಗೊಳ್ಳುತ್ತಾ ಹೋಗುತ್ತದೆ. ಇದರ ಪರಿಣಾಮ ಮುಂದಿನ ಪೀಳಅನುಭವಿಸಬೇಕಾಗುತ್ತದೆ. ಹೇಗೆ ಹಿಂದಿನ ಅಜ್ಜoದಿರು ಅನುಭವಿಸಿದ ಸ್ಥಿತಿ ಬರದಂತೆ ಮಾಡಲು ಸ್ವಂತ ಯೋಚನೆ ಮಾಡುವ, ನಿರ್ಧಾರ ಮಾಡುವ ಸ್ವಾಭಾವ ಬೆಳೆಯಬೇಕು, ಪ್ರತಿಯೊಂದಕ್ಕೂ ಇನ್ನೊಬ್ಬರ ಅಭಿಪ್ರಾಯ, ಇನ್ನೊಬ್ಬರ ಅವಲಂಬನೆ ಕಡಿಮೆಯಾಗಬೇಕು. ಇದು ನಿಜವಾದ ಪ್ರಜಾಪ್ರಭುತ್ವ ಬಲ ಪಡಿಸುವ ದಾರಿ.