ಭಾರತದಲ್ಲಿ ವ್ಯವಸ್ಥಿತವಾದ ಉದ್ಯೋಗ ಕ್ಷೇತ್ರ ಇಲ್ಲ
ಭಾರತದಲ್ಲಿ ಒಂದೇ ಒಂದು ವ್ಯವಸ್ಥಿತವಾದ ಉದ್ಯೋಗ ಮಾಡಿ ಸಂಪಾದನೆ ಮಾಡುವ ದಾರಿ ಇಲ್ಲ. ಆಸ್ಪತ್ರೆ, ಶಾಲೆ, ವ್ಯಾಪಾರ, ಕೃಷಿ, ಸಾರಿಗೆ, ಬ್ಯಾಂಕ್ ಇತ್ಯಾದಿ ಯಾವುದೇ ಕ್ಷೇತ್ರ ನೋಡಿದರು ಹೇಗಾದರೂ ಮಾಡಿ ಲಾಭ ಮಾಡಿ ಹೆಸರು ಗಳಿಸುವುದಕ್ಕಾಗಿ ಲೂಟಿ ಮಾಡುವ, ಸ್ಪರ್ಧೆ ಮಾಡುವ ಮುಖ್ಯ ಧ್ಯೇಯದೊಂದಿಗೆ ನಡೆಯುತ್ತಿದೆ ಹೊರತು ಜನರಿಗೆ ಉತ್ತಮ ಗುಣ ಮಟ್ಟದ ಸೇವೆ ದೊರೆಯಬೇಕು ಎನ್ನುವ ಉದ್ದೇಶಕ್ಕೆ ಯಾವ ಕ್ಷೇತ್ರದಲ್ಲಿಯೂ ಕಾಣಲು ಸಾಧ್ಯವಿಲ್ಲ.
ಯಾಕೆಂದರೆ ಪ್ರತಿ ಕ್ಷೇತ್ರವನ್ನು ವ್ಯಾಪಾರ ದೃಷ್ಟಿಯಿಂದ ನಡೆಯುವಂತೆ ಮಾಡಲು ನಮ್ಮ ಆಡಳಿತ ವ್ಯವಸ್ಥೆಯ ದೊಡ್ಡ ದೋಷವಾಗಿರುವುದು ಮುಖ್ಯ ಕಾರಣ. ಸರಕಾರದ ಆ ಕೆಲಸವು ಪ್ರಜೆಗಳ ನೇರ ನಿಯಂತ್ರಣದಲ್ಲಿ ನಡೆಯುವ ನಿಜವಾದ ಪ್ರಜಾಪ್ರಭುತ್ವ ಆಡಳಿತ ರೀತಿ ನಡೆಯಬೇಕಿತ್ತು, ಆದರೆ ಜನರು ತನ್ನ ಅಧಿಕಾರವನ್ನು ಪೂರ್ತಿ ಜನಪ್ರತಿನಿಧಿಯ ಕೈಗೆ ಕೊಟ್ಟು ಅವನಿಗೆ ಬೇಕಾದ ರೀತಿಯಲ್ಲಿ ಉಪಯೋಗ ಮಾಡಿರುವುದು ಎಲ್ಲಾ ಅವ್ಯವಸ್ಥೆತೆ ಕಾರಣ.
ಹಾಗಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಮುಖಾಂತರ ಎಲ್ಲಾರ ಜೀವನ ವ್ಯವಸ್ಥೆ ಸರಿಯಾಗಬೇಕಾದರೆ ಪ್ರಜೆಗಳು ವೋಟಿನ ಮುಖಾಂತರ ಅಧಿಕಾರ ತಮ್ಮ ಕೈಗೆ ಬರುವಂತೆ ಮಾಡಬೇಕು. ನೋಟಿನ ಮುಖಾಂತರ ನಾವು ವೋಟನ್ನು ಮಾರಿಕೊಂಡರೆ ಅವ್ಯವಸ್ಥೆಯ ಮಧ್ಯೆ ಬದುಕು ಸಾಗಿಸುವ ಸ್ಥಿತಿ ಬರುತ್ತದೆ. ಎಲ್ಲಾ ವ್ಯವಸ್ಥೆಯನ್ನು ಖಾಸಗಿ ಕಂಪನಿ ಮುಖಾಂತರ ದುಡ್ಡು ಕೊಟ್ಟು ಬೇಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ನಮ್ಮ ತೆರಿಗೆ ದುಡ್ಡಿನಿಂದ ಎಲ್ಲವನ್ನು ವ್ಯವಸ್ಥಿತವಾಗಿ ಪಡೆಯಬೇಕಾದವರು, ಬೇಡಿ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ. ಪ್ರತಿಯೊಬ್ಬನು ಉದ್ಯೋಗ ಪಡೆದು, ವ್ಯವಸ್ಥಿತ ಜೀವನ ವ್ಯವಸ್ಥೆ ಎಲ್ಲರೂ ಪಡೆಯುವಂತೆ ಮಾಡುವ ದೊಡ್ಡ ಜವಾಬ್ದಾರಿ ಎಲ್ಲಾರ ಕೈಗೂ ಬರುತ್ತದೆ.ಉದ್ಯೋಗ ಎಂದರೆ ಅದು ದೇಶದ ನಿಜವಾದ ಅಭಿವೃದ್ಧಿಗೆ ಪ್ರತಿ ಪ್ರಜೆಗೆ ಕೊಡುವ ಜವಾಬ್ದಾರಿ, ಆ ಜವಾಬ್ದಾರಿ ನಿರ್ವಹಣೆ ಮಾಡಿದಕ್ಕೆ ಕೊಡುವ ಸಂಭಾವನೆ, ಅವನ ಅತೀ ಮುಖ್ಯ ಜೀವನ ವ್ಯವಸ್ಥೆ ಎಲ್ಲರೂ ಪಡೆಯುವಂತೆ ಮಾಡಿದಾಗ ಎಲ್ಲ ಪ್ರಜೆಗಳು ದೇಶದ ನಿಜವಾದ ಸಂಪತ್ತು ಆಗುತ್ತಾರೆ, ನಿಜವಾದ ದೇಶ ಭಕ್ತರಾಗುತ್ತಾರೆ, ನಿಜವಾದ ಧರ್ಮ ರಕ್ಷಕರು ಆಗುತ್ತಾರೆ, ನಿಜವಾದ ದೇಶದ ಉದ್ದಾರಕ್ಕೆ ಶ್ರಮ ಪಡುವ ಪ್ರಾಮಾಣಿಕ ನಾಯಕ ಆಗಿರುತ್ತಾನೆ ಹೊರತು ಒಂದು ಪಕ್ಷ ವೋಟಿಗಾಗಿ ಒಂದು ನಾಯಕನನ್ನು ಬಿಂಬಿಸುವ ರಾಜಕೀಯ ವಿಧಾನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ.
Share on WhatsApp