ಹೊಸ ವರ್ಷದ ವಿಚಾರ ಹೇಗೆ ಇರಬೇಕು ನೋಡಿ
ಹೀಗೆ , ಹೀಗೆ ಸಂಕ್ಷಿಪ್ತವಾಗಿ ನೋಡುವುದಾದರೆ ಇಷ್ಟು ವರ್ಷಗಳ ಕಾಲ ನಾವು ಗುಲಾಮರಾಗಿದ್ದೇವ ಅಥವಾ ಪ್ರಜಾಪ್ರಭುತ್ವದಲ್ಲಿ ರಾಜರಾಗಿ ಬದುಕುತ್ತಿದ್ದೇನೆ ಎಂದು ಮನವರಿಕೆ ಮಾಡಿಕೊಳ್ಳಬೇಕು.
ನಾವು 2026ರ ಹೊಸ ವರ್ಷಕ್ಕೆ ಬದುಕಿ ಉಳಿದಿದ್ದೇವೆ ಎನ್ನುವುದು ಸಂತೋಷದ ವಿಚಾರ. ಯಾಕೆಂದರೆ 2025 ರಲ್ಲಿ ಅನೇಕ ಜನರು ತಮ್ಮ ವಯಸ್ಸು ಮುಗಿಯದೆ ಸಣ್ಣ ಪ್ರಾಯದಲ್ಲೇ ಹೋದವರು ಅನೇಕರು. ಯಾವುದೋ ಸುಂದರ ಕನಸಲ್ಲಿ ವಿಮಾನ ಕೂತ ಕೆಲವೇ ಸಮಯದಲ್ಲಿ ಬೂದಿಯಾದರು,ಬಸ್ಸಿನಲ್ಲಿ ಸುಖ ನಿದ್ರೆಯಲ್ಲಿ ಇದ್ದವರು ಜೀವಂತ ಉರಿದು ಹೋದರು, ಪ್ರಕೃತಿಯ ಸೊಬಗನ್ನು ಅನುಭವಿಸಲು ಬಂದ ನವ ವಧುಗಳನ್ನು ಗುಂಡಿನ ಏಟಿಗೆ ಅಮಾಯಕ ಮರಣ ಹೊಂದಿದರು, ಕ್ರಿಕೆಟ್ ದೇವರು, ಸಿನಿಮಾ ದೇವರ ದರ್ಶನಕ್ಕೆ ಹೋಗಿ ಜೀವ ಕಳೆದುಕೊಂಡರು, ಪರಸ್ಪರ ರೈಲುಗಳು ಡಿಕ್ಕಿ ಹೊಡೆದು ಸತ್ತರು, ಇನ್ನೂ ಕೊಲೆ, ಹಿಂಸೆ, ಮೋಸ, ದೌರ್ಜನ್ಯ ಅನುಭವಿಸಿ ಅನೇಕರು ಕಷ್ಟ ಅನುಭವಿಸಿದರು. ಇದೆಲ್ಲಾ ನೆಗೆಟಿವ್ ಯೋಜನೆ ಅಲ್ಲ, ನಿಜವಾದ ನಡೆದ ಘಟನೆ ಎಲ್ಲರನ್ನು ಪ್ರತಿ ದಿನ, ಪ್ರತಿ ವರ್ಷ ಎಚ್ಚರಿಸುತ್ತಿದೆ.
ಆದರೆ ನಾವೆಲ್ಲಾ ಖುಷಿಯಾಗಿ ಇನ್ನೂ ನಾವು ಶಾಶ್ವತವಾಗಿ ಇಲ್ಲಿಯೆ ಇದ್ದು ಕಾರುಬಾರ್ ಮಾಡುವ ಯೋಜನೆಯಲ್ಲಿ ಇರುತ್ತೇವೆ. ಆದರೆ ಈ ಪ್ರಕೃತಿ ನಿರಂತರ ಬದಲಾವಣೆ ಹೊಂದುತ್ತ ಬೇರೆ ಬೇರೆ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಅವಕಾಶ ಕೊಡುತ್ತಿದೆ. ಹಾಗಾಗಿ ಕೇವಲ ಒಬ್ಬನೇ ಅನುಭವಿಸಲು ಅವಕಾಶ ಇಲ್ಲ. ಆದರೆ ಇದ್ದ ಸಮಯದಲ್ಲಿ ನಾನೊಬ್ಬನೇ, ನಮ್ಮವರೇ ಪಡೆಯಬೇಕು ಎನ್ನುವ ಮೋಸದ ರಾಜಕೀಯ ಆಟಕ್ಕೆ ಕೆಟ್ಟ ಘಟನೆಯೊಂದಿಗೆ ಹಳೆ ವರ್ಷ ಅಂತ್ಯವಾಗಿದೆ. ಇನ್ನೂ ಬರುವ ಹೊಸ ವರುಷವಾದರೂ ಎಲ್ಲರಿಗೆ ಬದುಕಲು ಅವಕಾಶ ಕೊಡುವ ನಿಜವಾದ ಪ್ರಜಾಪ್ರಭುತ್ವ ಎಲ್ಲರು ಸೇರಿ ಬರುವಂತೆ ಮಾಡಬೇಕು ಹೊರತು, ಆಶಾಶ್ವತ ಮನುಷ್ಯ ಅಥವಾ ಒಬ್ಬ ನಾಯಕನನ್ನು ನಂಬಿ ಅಲ್ಲ ಮತ್ತು ಅವನ ಗುಲಾಮನಾಗಿ ಅಲ್ಲ. ಒಂದು ವ್ಯವಸ್ಥಿತ ಆಡಳಿತ ವಿಧಾನ ಯಾರು ಇಲ್ಲದಿದ್ದರೂ, ಎಲ್ಲರಿಗೂ ನ್ಯಾಯ ಕೊಡುವ, ಬದುಕಲು ಅವಕಾಶ ಕೊಡುವ ಪ್ರಜಾಪ್ರಭುತ್ವ ಆಡಳಿತ ವಿಧಾನ ಬರಬೇಕು.
ಅದಕ್ಕಾಗಿ ಎಲ್ಲರೂ ವೋಟಿನ ಮುಖಾಂತರ ಅಧಿಕಾರ ತಮ್ಮ ಕೈಗೆ ಪಡೆಯುವ ದೊಡ್ಡ ನಿರ್ಧಾರ ಹೊಸ ವರುಷದಲ್ಲಿ ಮಾಡಬೇಕು. ಇದು ಮಾತ್ರ ಎಲ್ಲರಿಗೂ ಬದುಕುವ ದಾರಿಯನ್ನು ಶಾಶ್ವತವಾಗಿ ಮಾಡುವ ಪ್ರಜಾಪ್ರಭುತ್ವ ವಿಧಾನ ಹೊರತು ಒಂದು ನಾಯಕ, ಪಕ್ಷವನ್ನು ನಂಬಿ ಗುಲಾಮ ರಾಗುವುದನ್ನು ತಪ್ಪಿಸಬಹುದು.
Share on WhatsApp