ಎಲ್ಲಕಿಂತ ಗುಣಗಳು ದೊಡ್ಡದು
ಹಣ ಅಧಿಕಾರ ಆಸ್ತಿ ಅಂತಸ್ತು ಇವೆಲ್ಲಕ್ಕಿಂತ ಮಿಗಿಲಾಗಿದ್ದು ಗುಣ ಮತ್ತು ಮಾನವೀಯತೆ ಎಂದು ಭಾರತದ ಕಾನೂನು ಮತ್ತೆ ಸಾಬೀತುಪಡಿಸಿದೆ. ಹಣ ಮತ್ತು ಅಧಿಕಾರ ಮತ್ತು ಬೆಂಬಲ ಇವು ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ದರ್ಪದಲ್ಲಿ ಬದುಕಿದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗಿದೆ.
ಈ ತೀರ್ಪು ಎಲ್ಲಾ ರಾಜಕೀಯ ನಾಯಕರಿಗೆ ಮತ್ತು ಮದವೇರಿದ ಅಧಿಕಾರಿಗಳಿಗೆ ಗುಂಡಾಗಳಿಗೆ ಪಾಠವಾಗಲಿದೆ ಇನ್ನಾದರೂ ನಮ್ಮ ಜನತೆ ಚುನಾವಣೆಯ ಸಂದರ್ಭದಲ್ಲಿ ಹಣಕ್ಕಿಂತ ಗುಣಗಳು ಮಾನವೀಯತೆ ಕೆಲಸಗಳು ಮುಖ್ಯ ಎಂದು ಹಣವನ್ನು ಪಡೆದುಕೊಳ್ಳದೆ ಮತವನ್ನು ಚಲಾಯಿಸಬೇಕು ಇಂದಿನ ಮನುಷ್ಯರಲ್ಲಿ ಕೇವಲ ಆಸ್ತಿ ಅಂತಸ್ತು ಇದ್ದವರಿಗೆ ಮಾತ್ರ ಬೆಲೆ ಕೊಡುವುದು ಸರ್ವೇಸಾಮಾನ್ಯವಾಗಿದೆ ಆದರೆ ಇನ್ನು ಮುಂದೆ ಆದರೂ ಇವೆಲ್ಲಕ್ಕಿಂತ ಮಾನವೀಯತೆ ಸಮಾನತೆ ಇರುವ ವ್ಯಕ್ತಿಗಳಿಗೂ ಬೆಲೆ ಕೊಡಬೇಕು.
ಮಕ್ಕಳಿಗಾಗಿ ಕೇವಲ ಆಸ್ತಿ ಅಂತಸ್ತು ಗಳಿಸುವ ಬದಲು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುವುದು ಮುಖ್ಯವಾದ ಅಂಶ ಮತ್ತು ಅವರ ಮುಂದಿನ ಜೀವನ ಸುಖವಾಗಿರಲು ಸುತ್ತಮುತ್ತಲಿರುವ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡುವುದು ಒಂದು ಪಾಲಕರ ಜವಾಬ್ದಾರಿಯಾಗಬೇಕು ಹಿಂದಿನ ದಿನಮಾನಗಳಲ್ಲಿ ಹಿರಿಯರ ಮಾತುಗಳಿಗೆ ಗೌರವ ಸಿಗುತ್ತಿತ್ತು ಹೀಗಾಗಿ ಮನುಷ್ಯರಲ್ಲಿ ಒಳ್ಳೆಯ ಗುಣಗಳ ಇರುವುದು ಮುಖ್ಯ ಇಂದು ಪ್ರತಿದಿನ ನ್ಯಾಯಾಲಯಗಳಲ್ಲಿ ಅನಾವಶ್ಯಕವಾಗಿ ಜನರು ತಮ್ಮ ನೆಮ್ಮದಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಜೀವನ ಏನು ಎಂದು ತಿಳಿದುಕೊಳ್ಳಲು ವಿಫಲವಾಗುತ್ತಿದ್ದಾರೆ.
ದುಡ್ಡಿದ್ದರೆ ಎಲ್ಲವೂ ಎಂದು ಸಮಾಜವನ್ನು ನಿರ್ಮಾಣ ಮಾಡುತ್ತಿದ್ದಾರೆ ಇದು ಒಂದು ತರಹ ಉಗ್ರವಾದಿ ಗಳ ಚಟುವಟಿಕೆ ಎಂದರೆ ತಪ್ಪಾಗಲ್ಲ ಅದು ಏಕೆಂದರೆ ಮುಂದಿನ ದಿನಮಾನಗಳಲ್ಲಿ ದುಡ್ಡಿಗಾಗಿ ಮನುಷ್ಯತ್ವದ ಕೊಲೆ ಆಗಲಿದೆ ಹೀಗಾಗಿ ಕೇವಲ ಮಕ್ಕಳಿಗಾಗಿ ಆಸ್ತಿ ಅಂತಸ್ತು ಮಾಡಿದರೆ ಸಾಲದು ಅವರಿಗಾಗಿ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬೇಕು