ಧರ್ಮ ಉಳಿಸುವುದು ಉದ್ದೇಶ
ಮಾನವೀಯತೆ ಉಳಿಸುವುದು ಎಲ್ಲ ಧರ್ಮದ ಉದ್ದೇಶ. ಈ ಉದ್ದೇಶ ದಾರಿ ತಪ್ಪಿದಾಗ ಏನು ಮಾಡುವುದು. ಧರ್ಮ ಯಾರಾದ್ದೋ ಹಿಡಿತದಲ್ಲಿ ಇರುವಂತೆ ಮಾಡಿ, ಅದರ ಹೆಸರಲ್ಲಿ ಅಧಿಕಾರ, ಸಂಪತ್ತು ಗೌರವ ಸಂಪಾದಿಸುವ ದಾರಿಯಾಗಬಾರದು. ಇದನ್ನು ತಡೆದಾಗ ಎಲ್ಲಾ ಧರ್ಮವು ಪರಿಶುದ್ಧವಾಗಿ, ಧರ್ಮದ ಹೆಸರಲ್ಲಿ ಅಧರ್ಮ ನಡೆಯದಂತೆ ತಡೆಯಬಹುದು. ಹಾಗಾದರೆ ಧರ್ಮ ಎನ್ನುವುದು ಅಧಿಕಾರ, ಸಂಪತ್ತು, ಗೌರವದಿಂದ ದೂರ ಇದ್ದು ಇಡೀ ಮಾನವೀಯತೆಯ ಬಿಂಬವಾಗಿ ಇರಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರನಲ್ಲಿ ನಡೆಯುವ ದುರುಪಯೋಗ ಇಡೀ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಅದಕ್ಕಾಗಿ ಧರ್ಮ ಮತ್ತು ಆಡಳಿತ ಎರಡು ಜನರ ನಿಯಂತ್ರಣದಲ್ಲಿ ಪ್ರತ್ಯೇಕವಾಗಿ ಇರಬೇಕು. ಇದನ್ನು ಮಾಡಾದೆ ಇದ್ದರೆ ನಮ್ಮ ಮಕ್ಕಳು ಹಿಂದಿನ ಗುಲಾಮ ಗಿರಿ ಪದ್ಧತಿ ಪಡೆಯುವಂತೆ ಆಗುತ್ತದೆ.ಧರ್ಮ ಮತ್ತು ಆಡಳಿತ ಎರಡು ಸಹ ಪ್ರತಿಯೊಬ್ಬನಿಗೂ ಬಹಳ ಮುಖ್ಯ. ಆದರೆ ಅದನ್ನು ಯಾವ ರೀತಿ ಉಳಿಸಬೇಕು ಎನ್ನುವ ಸ್ಪಷ್ಟ ದಾರಿ ದೊರೆಯದಂತೆ ಆಗಿದೆ. ಯಾಕೆಂದರೆ ಧರ್ಮ ಮತ್ತು ಆಡಳಿತ ವ್ಯವಸ್ಥೆ ಎರಡನ್ನು ಒಟ್ಟು ಸೇರಿಸಿ ಮೋಸ ಮಾಡುವ ರಾಜಕೀಯ ತಂತ್ರಗಾರಿಕೆ ನಡೆಯುವಂತೆ ಆಗಿದೆ. ಹಾಗಾಗಿ ಧರ್ಮವು ಉಳಿಯಬೇಕು, ಆಡಳಿತವು ಸರಿಯಾಗಿ ನಡೆಯಬೇಕು ಎನ್ನುವ ಭಾವನೆಯವರು ಖಂಡಿತ ಎರಡನ್ನು ಪ್ರತ್ಯೇಕ ಇಟ್ಟು ಸಂರಕ್ಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಕ್ಕೆ ಸತ್ಯ ಯಾವುದು, ಸುಳ್ಳು ಯಾವುದು ಎಂದು ನಂಬಲು ಸಾಧ್ಯವಾಗದೆ ಮಾನವೀಯತೆಗೆ ಬೆಲೆ ಇಲ್ಲದಂತೆ ಆಗುತ್ತದೆ. ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಹೀಗೆ ಆಗಿದೆ.ಹಾಗಾಗಿ ಧರ್ಮ ಮತ್ತು ಆಡಳಿತ ಎರಡನ್ನು ಪ್ರತ್ಯೇಕ ವಾಗಿ ಕಾಪಾಡಿ ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿ ಪ್ರಜೆಯ ಮೇಲಿದೆ.