ಮನೆಯ ಚಿಂತೆ, ದೇಶದ ಚಿಂತೆ?
ಇಂದಿನ ಎಷ್ಟೋ ಜನರು ಮನೆಯ ಚಿಂತೆ ಮಾಡದೆ ಇರುವುದನ್ನು ನೋಡಿದರೆ ಮುಂದಿನ ಕಾಲದ ದೇಶದ ಬಗ್ಗೆ ಚಿಂತನೆ ಮಾಡುವರು ಯಾರು? ಒಂದು ಮನೆಯ ಆಡಳಿತ ಹೇಗಿರಬೇಕು ಎಂದು ಎಲ್ಲ ಸದಸ್ಯರು ಯೋಚನೆ ಮಾಡುತ್ತಾರೆ. ಆದರೆ ತನ್ನ ಗ್ರಾಮದ, ತನ್ನ ರಾಜ್ಯದ, ತನ್ನ ದೇಶದ ಆಡಳಿತದ ಯೋಚನೆಯ ಅಗತ್ಯ ಬೇಡವೇ?. ನಮ್ಮ ಮನೆಯ ವ್ಯವಸ್ಥೆ ಸರಿ ಮಾಡಲು ನಮಗೆ ಜವಾಬ್ದಾರಿ, ಅಧಿಕಾರ, ಕೆಲಸ ಎಲ್ಲವನ್ನು ನಾವು ಪಡೆದಿದ್ದೇವೆ. ಹಾಗಾಗಿ ಹೆಚ್ಚು ಅಭಿವೃದ್ಧಿ ಹೊಂದುವ ದಾರಿಯನ್ನು ಹುಡುಕುವ ಪ್ರಯತ್ನ ಎಲ್ಲರೂ ಮಾಡುತ್ತಾರೆ. ಅದರೆ ನಮ್ಮ ಗ್ರಾಮದ ವಿಚಾರ ಬಂದಾಗ ನಮಗೆ ಯಾವ ಜವಾಬ್ದಾರಿ, ಅಧಿಕಾರ, ಕೆಲಸವು ಇಲ್ಲ. ಕೇವಲ ಸಂಬಳ ಕ್ಕಾಗಿ ಮಾಡುವ ಕೆಲಸ ಮಾತ್ರ ನಮ್ಮ ಜವಾಬ್ದಾರಿ ಎಂದು ಭಾವಿಸುತ್ತೇವೆ. ಅದನ್ನು ಸಹ ಸರಿಯಾಗಿ ಮಾಡುವ ಜವಾಬ್ದಾರಿ ಕೊಡಲಿಲ್ಲ. ಯಾಕೆಂದರೆ ಸರಕಾರಿ ಕೆಲಸ ದೇವರ ಕೆಲಸವಾಗಿ ಮಾರ್ಪಡು ಆಗಿದೆ. ಒಂದು ಗ್ರಾಮದ ವ್ಯವಸ್ಥೆ ಸರಿಯಾಗಬೇಕಾದರೆ ಎಲ್ಲಾ ಗ್ರಾಮದ ಜನರ ಜವಾಬ್ದಾರಿ, ಪಾಲ್ಗೊಂಲ್ಲುವಿಕೆ ಅತೀ ಅಗತ್ಯ. ಒಂದು ರಾಜ್ಯದ ಅಭಿವೃದ್ಧಿಗೆ ಎಲ್ಲರ ಪಾಲ್ಗೊಂಲ್ಲುವಿಕೆ, ಜವಾಬ್ದಾರಿ ಅಗತ್ಯ. ಒಂದು ದೇಶದ ಅಭಿವೃದ್ಧಿಗೆ ದೇಶದ ಎಲ್ಲಾ ಜನರ ಜವಾಬ್ದಾರಿ, ಪಾಲ್ಗೊಂಲ್ಲುವಿಕೆ ಅತೀ ಅಗತ್ಯ ಹೊರತು ಯಾರೋ ಒಬ್ಬ ಸಮರ್ಥ ಬರುತ್ತಾನೆ, ಉದ್ದಾರ ಮಾಡುತ್ತಾನೆ ಎನ್ನುವುದು ಕೇವಲ ರಾಜಕೀಯ ಭ್ರಮೆ. ಈ ಭ್ರಮೆಯಿಂದ ಹೊರಗೆ ಬರದಿದ್ದರೆ ಖಂಡಿತ ಅಭಿವೃದ್ಧಿ ಸಾಧ್ಯವಿಲ್ಲ. ಇದಕ್ಕಾಗಿ ಪಕ್ಷ, ಜಾತಿ, ಧರ್ಮ, ನಾಯಕ, ದೇಶ ಭಕ್ತ, ಸೇವಕ, ಸಮರ್ಥ ಎನ್ನುವ ವಿಚಾರ ಬಿಟ್ಟು, ತನ್ನ ಕೈಗೆ ಅಧಿಕಾರ ಬರುವುದು ನಿಜವಾದ ಪ್ರಜಾಪ್ರಭುತ್ವ ಎಂದು ಅರಿತು ಆಡಳಿತದಲ್ಲಿ ಪಾಲ್ಗೊಂಲ್ಲುವುದು ನಿಜವಾದ ಅಭಿವೃದ್ಧಿಯ ದಾರಿ.