ಬಡವರು ಹೆಚ್ಹು ಆದಷ್ಟು ರಾಜಕೀಯ ಮಾಡುವುದು
ಬಡವರ ಪಕ್ಷಗಳು ಬಡವರ ಬಂಧು ಬಡವರ ನಾಯಕ ಎಂದು ರಾಜಕೀಯ ರಾಜಕೀಯ ಮಾಡುತ್ತಿರುವವರನ್ನು ನಾವು ನೋಡುತ್ತೇವೆ ಮೇಲ್ನೋಟಕ್ಕೆ ಬಡತನ ಎನ್ನುವುದು ಅವರವರ ಅಣೆಬರಹ ಎಂದು ಹೇಳುವುದು ವಾಡಿಕೆ. ಬಡತನ ಎನ್ನುವುದು ಸೃಷ್ಟಿ ಮಾಡುವುದು ಅಲ್ಲ, ಅವರವರ ಪ್ರಯತ್ನ, ಸಾಮರ್ಥ್ಯ, ದುಡಿಮೆ ಆಧಾರಿಸಿ ನಡೆಯುವ ವ್ಯತ್ಯಾಸ. ಇದನ್ನು ಸರಿ ಮಾಡಲು ದೇವರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕರ್ಮಫಲ ಯಾರನ್ನೂ ಬಿಡುವುದಿಲ್ಲ ಎನ್ನುವ ಭೋದನೆ ಕೇಳಿ ಸಮಾಧಾನ ಪಟ್ಟು ದಿನ ದೂಡುವ ಜನರು ಅನೇಕ.
ಆದರೆ ಈ ಬಡತನ ಎನ್ನುವ ವರ್ಗ ಇರುವಂತೆ ಮಾಡಿ ತಮ್ಮ ಬೆಳೆ ಬೇಯಿಸುವ ರಾಜಕೀಯ ವರ್ಗದ ಆಟ ಅರ್ಥ ಮಾಡಿಕೊಳ್ಳದಿದ್ದಾರೆ ಅಂಬೇಡ್ಕರ್ ಅವರು ಕೊಟ್ಟಿರುವ ಪ್ರಜಾಪ್ರಭುತ್ವ ಆಡಳಿತಕ್ಕೆ ಬೆಲೆ ಇಲ್ಲ. ಈ ಆಟಗಳ ಪಟ್ಟಿ ಒಮ್ಮೆ ನೋಡೋಣ
1.ಮೊದಲು ಅಧಿಕಾರವನ್ನು ಒಂದು ವರ್ಗ ನಿಯಂತ್ರಣ ಮಾಡುವಂತೆ ಮಾಡುವುದು
2.ಇದನ್ನು ಪಡೆಯಲು ಜಾತಿ, ಧರ್ಮ, ದೇವರು ಎನ್ನುವ ವಿಚಾರ ತಂದು ಭಾವನಾತ್ಮಕ ಮೋಸ ಮಾಡಿ ವೋಟು ಗಿಟ್ಟಿಸುವುದು.
3.ವೋಟು ಪಡೆಯಲು ಅಧಿಕಾರ ಸ್ಥಾನದಲ್ಲಿ ಹೆಚ್ಚು ಜನ ಹೊಂದಿರುವ ಬಡ ವರ್ಗದವನನ್ನು ಕೂರಿಸುವುದು, ಇವನು ಹೇಳಿದಂತೆ ಅವನು ತಲೆ ಅಲ್ಲಾಡಿಸಿದರೆ ಮಾತ್ರ ಮುಂದೆ ಅವಕಾಶ.
4.ದೇಶದ ಸಂಪತ್ತು ನಿಜವಾದ ಬಡವನ ಅವಶ್ಯಕತೆಗೆ ಉಪಯೋಗವಾಗದಂತೆ, ಅನವಶ್ಯಕ ದೇಶದ ಕೀರ್ತಿ ಹೆಚ್ಚಿಸುತ್ತೇವೆ ಎಂದು ಮೂರ್ತಿ, ಪ್ಲೇಯ್ ಓವರ್, ಸ್ವಾರಂಗ ಮಾರ್ಗ, ಇನ್ನೂ ಹೆಚ್ಚು ಹೆಚ್ಚು ರಕ್ಷಣ ವೆಚ್ಚ ಮಾಡುವುದು.
5.ಆಡಳಿತ ವರ್ಗಕ್ಕೆ ಎಲ್ಲಾ ಆಧುನಿಕ ಸೌಲಭ್ಯ, ಅವರು ಏನೋ ದೊಡ್ಡ ನಾಯಕ ಎಂದು ಬಿಂಬಿಸಿ, ಸುತ್ತಲೂ ರಕ್ಷಣೆ, ವಿಶೇಷ ವ್ಯವಸ್ಥೆ ನಿರ್ಮಾಣ ಮಾಡಿ, ನಮ್ಮ ತೆರಿಗೆಯಿಂದ ಕೊಡುವುದು.
6.ಬಡವ ಹೆಚ್ಚು ದುಡಿದರೂ ಕಡಿಮೆ ಆದಾಯ ದೊರೆಯುವಂತೆ ಮಾಡುವುದು
7.ಶಾಶ್ವತ ಪರಿಹಾರ ಕೊಡದೇ ತಾತ್ಕಾಲಿಕ ಪರಿಹಾರ ಮಾಡಿ ಸಮಸ್ಯೆ ಶಾಶ್ವತವಾಗಿ ಇರುವಂತೆ ಮಾಡುವುದು.
8.ವಿದ್ಯೆ ಪಡೆದರೂ ಉದ್ಯೋಗ ಸರಿಯಾಗಿ ದೊರೆಯದಂತೆ ಮಾಡುವುದು
9.ಹೆಚ್ಚು ಹೆಚ್ಚು ಸಾಲ ಮಾಡಿ ಗುಲಾಮನಾಗಿ ಇರುವಂತೆ ನೋಡಿಕೊಳ್ಳುವುದು.
10.ದೇಶ ಭಕ್ತಿ, ಧರ್ಮ ರಕ್ಷಣೆ ಎಂದು ಭಾಷಣ ಮಾಡುವವರ ತಂಡ ರಚನೆ ಮಾಡಿ ಭಾವನಾತ್ಮಕ ವಿಚಾರ ತಂದು ಮತ ಸೆಳೆಸು, ತನ್ನ ಮನೆ, ತಂದೆ, ತಾಯಿ, ಮಕ್ಕಳ ಜೀವನ ವ್ಯವಸ್ಥೆಗೆ ಗಮನ ಕೊಡದೇ ದೇಶ ಭಕ್ತಿ, ಧರ್ಮ ರಕ್ಷಣೆ ಎನ್ನುವ ಹೆಸರಲ್ಲಿ ಜೀವದ ಹಂಗು ತೊರೆದು ತೊಡಗುವಂತೆ ಮಾಡಿ ಮೋಸ ಮಾಡುವುದು.
11.ಗುಲಾಮನಾಗಿ ಅವರ ಹಿಂದೆ ಹೋಗಿ ಜೈ ಎನ್ನುವವರನ್ನು ನಾಯಕನಾಗಿ ಬಿಂಬಿಸುವುದು, ಉಚಿತ ಹೊಗಳಿಕೆಗೆ ಆಸೆ ಪಡುವಂತೆ ಮಾಡುವುದು, ಬ್ಯಾನರ್ ನಲ್ಲಿ ಫೋಟೋ ಹಾಕಿ ಉಚಿತ ಪ್ರಚಾರಕ್ಕೆ ಆಸೆ ಪಡುವಂತೆ ಮಾಡುವುದು, ಸ್ಟೇಜ್ ಮೇಲೆ ಕುಳ್ಳಿರಿಸಿ ಮಂಗ ಮಾಡುವುದು. ಇದೆಲ್ಲಾ ತಂತ್ರಗಾರಿಕೆ ಅರಿವಾಗದೆ ತೆರಿಗೆಯಿಂದ, ಸರಕಾರದಿಂದ, ಪ್ರಜಾಪ್ರಭುತ್ವದಿಂದ ದೊರೆಯಬೇಕಾದ ನಿಜವಾದ ಜೀವನ ವ್ಯವಸ್ಥೆ ದೊರೆಯದೆ ಬಡವನಾಗಿ ಉಳಿಯುವಂತೆ ಮಾಡುವುದರಲ್ಲಿ ಯಶಸ್ಸು ಕಂಡಿದ್ದಾರೆ.