ಗೊಬ್ಬರಕ್ಕಾಗಿ ಬೀದಿಯಲಿ ಬ್ರಾಂಡ್ ರೈತ
ಕೇವಲ ಐದನೂರು ರೂಪಾಯಿ ತಮ್ಮ ವೋಟ್ ಮಾರಿಕೊಂಡು ಇಂದು ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದಾರೆ ಇದು ಇಂದಿನ ರೈತರ ಪರಿಸ್ಥಿತಿ. ಭೂಮಿ ಒಂದು ಬೀಜಕ್ಕೆ 10 ಬೀಜಗಳನ್ನು ಕೊಡುತ್ತಿದೆ ಆದರೂ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ ಯಾಕೆ ಅವರಿಗೆ ಜ್ಞಾನದ ಕೊರತೆಯಾಗಿ, ತಾಳ್ಮೆ ತ್ಯಾಗ ಇವುಗಳನ್ನು ಮರೆಯುತ್ತಿದ್ದಾರೆ.
ರೈತ ಎಂದರೆ ಅದು ಒಂದು ಬ್ರಾಂಡ್ ಅನ್ನುವುದನ್ನು ಮರೆತ ಕೇವಲ ಆ ಬ್ರ್ಯಾಂಡ್ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಏಕೆಂದರೆ ಚುನಾವಣೆಯ ವೇಳೆಯಲ್ಲಿ ತನ್ನ ಜಾತಿಯವರಿಗೆ ಅಥವಾ 500 ರೂಪಾಯಿಗೆ ಮಾರಿಕೊಳ್ಳುವುದರಿಂದ ರೈತನ ಬ್ರಾಂಡ್ ಮೌಲ್ಯ ಕಡಿಮೆಯಾಗುತ್ತಿದೆ ಹಾಗೂ ಜ್ಞಾನವು ಕಡಿಮೆಯಾಗುತ್ತಿದೆ, ಒಗ್ಗಟ್ಟು ಕಡಿಮೆಯಾಗುತ್ತಿದೆ ಸ್ವಾಭಿಮಾನವು ಕಡಿಮೆಯಾಗುತ್ತಿದೆ.
ಎತ್ತು ದನಕರಗಳನ್ನು ಮಾರಿ ಗೊಬ್ಬರದ ಮೂಲವನ್ನು ಕಳೆದುಕೊಂಡಿದ್ದಾನೆ ಹೀಗಾಗಿ ಬೇರೆಯವರ ಹತ್ತಿರ ಭಿಕ್ಷೆ ಬೇಡುವುದು ಅನಿವಾರ್ಯವಾಗಿದೆ ಹಸುಗಳು ಹಾಲು ಕೊಡುತ್ತಿದ್ದರು ಹಾಲನ್ನು ಮಾರಿ ಸಾರಾಯಿ ಕುಡಿಯುವ ಚಟವನ್ನು ಮಾಡುತ್ತಿದ್ದಾನೆ ಹೀಗಾಗಿ ಚಟಗಳಿಗಾಗಿ ತನ್ನ ಬ್ರಾಂಡ್ ಕಳೆದುಕೊಳ್ಳುತ್ತಿದ್ದಾನೆ ಎಲ್ಲದಕ್ಕಿಂತಲೂ ದೊಡ್ಡ ಹುದ್ದೆ ಎಂದರೆ, ದೊಡ್ಡ ಬ್ರಾಂಡ್ ಎಂದರೆ ಅದು ರೈತ ಈ ಅರಿವನ್ನು ಮರೆತಿದ್ದಾನೆ ರೈತ ತನ್ನ ಬ್ರಾಂಡನ್ನು ಹೆಚ್ಚಿಸಿಕೊಳ್ಳಲು ಬೀಜ ಉತ್ಪಾದನೆ, ಗೊಬ್ಬರ ಉತ್ಪಾದನೆ ತೊಡಗಿ ಕೊಳ್ಳಬೇಕು ಹಾಗೂ ಸ್ವಾವಲಂಬಿಯಾಗಿರಬೇಕು ಅಂದಾಗ ಮಾತ್ರ ರೈತ ಲಾಭ ಪಡೆಯಬಹುದು. ಇಂದಿನ ಯುವಕರು ಚಟಗಳ ದಾಸ ರಾಗುವ ಬದಲು, ರೈತರಿಗೆ, ಬಡವರಿಗೆ ಬೆನ್ನಲುಬು ಆಗಿರುವುದು ಒಳ್ಳೆಯ ಉದ್ದೇಶ.
ಸಂಪಾದನೆ: ಆಂಜನೇಯ