ಇನ್ನು ಮುಂದೆ ಹಳ್ಳಿಗಳಿಗೆ ಡಿಮಾಂಡಪ್ಪ ಡಿಮಾಂಡು
ಮುಂದಿನ ದಿನಮಾನಗಳಲ್ಲಿ ಹಳ್ಳಿಗಳಿಗೆ ಬೆಲೆ ಬರುವ ಕಾಲ ಸಮೀಪದಲ್ಲಿ ಇದೆ ಹೇಗೆ ಅಂತೀರಾ ಹಿಂದಿನ ದಿನಮಾನಗಳಲ್ಲಿ ಯಾವುದೇ ಒಂದು ವಸ್ತು ಬೇಕಾದರೂ ನಗರಗಳಿಗೆ ಹೋಗಿ ತರಬೇಕಾಗಿತ್ತು . ಇದರಿಂದಾಗಿ ನಗರದಲ್ಲಿರುವ ಹೋಟೆಲ್ ಗಳು ಪೆಟ್ರೋಲ್ ಬಂಕ್ಗಳು ನಡೆಯುತ್ತಿದ್ದವು.
ಆದರೆ ಇಂದಿನ ದಿನಮಾನಗಳಲ್ಲಿ ಹಳ್ಳಿಯ ಜನರು ವಿದ್ಯಾವಂತರಾಗಿದ್ದು ಟೆಕ್ನಾಲಜಿ ಉಪಯೋಗಿಸುತ್ತಿದ್ದಾರೆ ಇಂದು ಹಳ್ಳಿಗಳಲ್ಲಿ ಕುಳಿತುಕೊಂಡು ತಮಗೆ ಏನು ಬೇಕು ಅದನ್ನು ಮೊಬೈಲ್ ನಲ್ಲಿ ಆರ್ಡರ್ ಮಾಡಿದರೆ ನೇರವಾಗಿ ತಮ್ಮ ಹಳ್ಳಿಯ ಮನೆಗೆ ಬಂದು ಸೇರುತ್ತದೆ ಮತ್ತು ವಾರದ ಸಂತೆ, ಬೀಜ ಗೊಬ್ಬರ ಔಷಧಿ ಅಂಗಡಿಗಳು ಸಣ್ಣ ಪುಟ್ಟ ಬಟ್ಟೆ ಅಂಗಡಿಗಳು ಫೋಟೋ ಸ್ಟುಡಿಯೋಗಳು ಕಂಪ್ಯೂಟರ್ ಅಂಗಡಿಗಳು ಮತ್ತು ಇತರೆ ರಿಪೇರಿ ಮಾಡುವವರು ಗ್ಯಾಸ್ ಹೀಗೆ ಮುಂತಾದ ಅವಶ್ಯಕತೆ ಇರುವ ಎಲ್ಲವೂ ಹಳ್ಳಿಯಲ್ಲಿ ಸಿಗುತ್ತಿದೆ ಹೀಗಾಗಿ ಪದೇ ಪದೆ ಪಟ್ಟಣಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ ಮುಂದಿನ ದಿನಮಾನಗಳಲ್ಲಿ ಹಳ್ಳಿಯ ಜನರು ನಗರಗಳ ಕಡೆ ಪ್ರಯಾಣ ಬೆಳೆಸುವುದು ಕಡಿಮೆಯಾದರೆ ನಗರದಲ್ಲಿರುವ ಹೋಟೆಲ್ ಮತ್ತು ಪೆಟ್ರೋಲ್ ಗಳಂತಹ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ನಷ್ಟವಾಗಬಹುದು.
ಇಂದು ಹಳ್ಳಿಗಳಲ್ಲಿ ನೀರು ಮನೆ ಬಾಗಿಲಿಗೆ ಬರುತ್ತಿದೆ ಮತ್ತು ಗ್ಯಾಸ್ ಕೂಡ ಮನೆಬಾಗಲಿಗೆ ಬರುತ್ತಿದೆ ಬಾರ್ ಹೊರತುಪಡಿಸಿ ಸುಖವಾದ ಜೀವನ ನಡೆಸಲು ಎಲ್ಲವೂ ಹಳ್ಳಿಯಲ್ಲಿಯೇ ಲಭ್ಯವಿದೆ ಇನ್ನು ಅವಶ್ಯಕತೆ ಇರುವುದು ಕಾಲೇಜುಗಳು ಮತ್ತು ದೊಡ್ಡ ಆಸ್ಪತ್ರೆಗಳು ಬೇಕಾಗುತ್ತದೆ ಅವುಗಳು ಕೂಡ ಹತ್ತಿರದ ಹೋಬಳಿ ಮಟ್ಟದಲ್ಲಿ ಆದರೆ ಹಳ್ಳಿಯ ಜನರು ನಗರಗಳ ಕಡೆ ಹೋಗುವುದನ್ನು ಕಡಿಮೆಯಾಗುತ್ತದೆ ಇಂದಿನ ದಿನಮಾನಗಳಲ್ಲಿ ನಾವು ಹಳ್ಳಿಯಲ್ಲಿ ಕಾರು ಬಿಲ್ಡಿಂಗ್ ಇವೆಲ್ಲವನ್ನು ನಾವು ಕಾಣಬಹುದು.
ಹಳ್ಳಿ ಮತ್ತು ನಗರಗಳ ವ್ಯತ್ಯಾಸ ಅತಿ ಹೆಚ್ಚಾಗಿ ಏನು ಇಲ್ಲ ನಗರಗಳಲ್ಲಿ ವಾಸಿಸುವ ಜನರು ಪ್ರತಿದಿನ ಮಾಲಿನ್ಯವಾದ ಗಾಳಿಯನ್ನು ಸೇವಿಸುತ್ತಿದ್ದಾರೆ ಹೀಗಾಗಿ ಆರೋಗ್ಯದ ದೃಷ್ಟಿ ಗಳಿಗೆ ಇನ್ಶೂರೆನ್ಸ್ ಮಾಡಿ ಕೊಳ್ಳುವ ಅವಶ್ಯಕತೆ ಇದೆ ಒಂದು ವಿಸರ್ಜನೆ ಮಾಡಲು ನಗರಗಳಲ್ಲಿ ದುಡ್ಡು ಕೊಡಬೇಕಾದಂತ ಪರಿಸ್ಥಿತಿ ಎದುರಾಗಿದೆ ಇವಾಗ ನಾವು ವಿಚಾರ ಮಾಡಿದರೆ ನಗರ ಜೀವನಕ್ಕಿಂತ ಹಳ್ಳಿಯ ಜೀವನವೇ ಉತ್ತಮವಾಗಿ ಇರುವುದು ಎಂದರೆ ತಪ್ಪಾಗಲಾರದು