ಧರ್ಮವನ್ನು ಬಲ ಪಡಿಸುವುದು!
ಧರ್ಮದ ಮೂಲ ಯವುದಯ್ಯ? ಮೇಲೂ, ಕೀಳು, ಬಣ್ಣ, ಸಾಮರ್ಥ್ಯದ ಮಾಪನ ಇಲ್ಲದೆ, ಕೇವಲ ಮಾನವೀಯತೆ,ನ್ಯಾಯ, ಅನ್ಯಾಯದ ಮುಖಾಂತರ ವ್ಯತ್ಯಾಸ ಕಾಣಬೇಕು ಎನ್ನುವ ಭಾವನೆ ಇದ್ದವರಿಗೆ ಸುಲಭ ಉತ್ತರ ದೊರೆಯುತ್ತದೆ. ನಮ್ಮ ಧರ್ಮದ ಎಲ್ಲಾರಿಗೂ ಸಮಾನವಾಗಿ ಭೂಮಿ, ಸಂಪತ್ತು, ಗೌರವ, ಅಧಿಕಾರ ದೊರೆಯುವಂತೆ ಮಾಡುವುದು ಮೊದಲನೇ ಹೆಜ್ಜೆಯಾಗಿದೆ. ಆಗ ಅಧಿಕಾರ, ಭೂಮಿ, ಸಂಪತ್ತು, ಗೌರವ ಕೆಲವು ವರ್ಗಕ್ಕೆ ಮಾತ್ರ ಸೀಮಿತ ಮಾಡುವ ಆಟ ನಿಲ್ಲುತ್ತದೆ. ಈ ಆಟಕ್ಕಾಗಿ ದೇವರು, ಧರ್ಮ, ಸೇವೆ, ನಾಯಕ, ಸಮರ್ಥ, ಸತ್ಯವಂತ, ಧರ್ಮ ರಕ್ಷಕ, ದೇಶ ಭಕ್ತ ಎನ್ನುವ ವಿಚಾರ ಉಪಯೋಗ ಮಾಡದಂತೆ ಆಗಬೇಕು. ನಮ್ಮ ಧರ್ಮ ಬಲಿಷ್ಠವಾಗಿ ಶಾಶ್ವತವಾಗಿ ಉಳಿಯಬೇಕಾದರೆ ಭೂಮಿ, ಸಂಪತ್ತು, ಗೌರವ, ಅಧಿಕಾರವನ್ನು ಮೊದಲು ಹಂಚುವ ಕೆಲಸ ಆಗಬೇಕು. ಆಗ ವ್ಯತ್ಯಾಸ ಕಡಿಮೆಯಾಗಿ ಎಲ್ಲರೂ ಅವರವರ ಪಾಲಿನ ಕರ್ತವ್ಯ ಮಾಡಲು ಪ್ರಜಾಪ್ರಭುತ್ವ ಆಡಳಿತದಲ್ಲಿ ಅವಕಾಶ ದೊರದಂತೆ ಆಗುತ್ತದೆ. ಇಲ್ಲದಿದ್ದರೆ ಕೆಲವರು ಕೂತು ತಿನ್ನುವುದು, ಇನ್ನೂ ಕೆಲವರು ಲೂಟಿ ಮಾಡಿ ತಿನ್ನುವುದು, ಇನ್ನೂ ಕೆಲವರು ಮೋಸ ಮಾಡಿ, ಇನ್ನೂ ಕೆಲವರು ದೌರ್ಜನ್ಯ ಮಾಡಿ, ಇನ್ನೂ ಕೆಲವರು ಹಿರಿಯರಿಂದ ಉಚಿತವಾಗಿ ಬಳುವಳಿಯಾಗಿ ಬಂದ ಸಂಪತ್ತಿನಿಂದ ಕಾರುಭಾರು ಮಾಡುವುದು ಇದೆಲ್ಲಾ ನಡೆಯುವುದು ಸಾಮಾನ್ಯ. ಹಾಗಾಗಿ ಯಾರು ನಿಜವಾದ ಧರ್ಮ ರಕ್ಷಣೆ ಮಾಡುತ್ತಾರೋ ಅವರು ಮೊದಲು ತಮ್ಮ ಭಾಷಣದಲ್ಲಿ ಸಂಪತ್ತು, ಭೂಮಿ, ಅಧಿಕಾರ, ಗೌರವವನ್ನು ತಮ್ಮ ಧರ್ಮದವರಿಗೆ ಮಾತ್ರ ಹಂಚಿ, ನಮ್ಮ ಧರ್ಮವನ್ನು ಉಳಿಸೋಣ, ಬೆಳೆಸೋಣ, ಇನ್ನೊಂದು ಧರ್ಮಕ್ಕೆ ಬೆಂಬಲ ಕೊಡದಂತೆ ಮಾಡಲು ಇದೊಂದೇ ದಾರಿ ಎಂದು ಯಾವ ಧರ್ಮ ರಕ್ಷಕನು ಹೇಳಲಿಲ್ಲ. ಯಾಕೆಂದರೆ ಅವನಿಗೆ ಚೆನ್ನಾಗಿ ನಮ್ಮ ಧರ್ಮದವರನ್ನು ಹೊಡೆದು ಹೇಗೆ ನಾನು, ನನ್ನ ಜಾತಿಯನ್ನು ಅಧಿಕಾರ, ಸಂಪತ್ತು, ಗೌರವ ಪಡೆಯುವಂತೆ ಮಾಡಲು ಉಳಿದವರನ್ನು ಹೇಗೆ ಮೋಸ ಮಾಡಬೇಕು ಎಂದು ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಆಟ ಅರ್ಥವಾಗದ ವರ್ಗವನ್ನು ಹೆಚ್ಚು ಸೃಷ್ಟಿ ಮಾಡುವ ಕೆಲಸ ನಿರಂತರವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದಕ್ಕಾಗಿ ಅಂಬೇಡ್ಕರ್ ಅವರು ಎಲ್ಲಾರೂ ಸ್ವಾಭಿಮಾನವಾಗಿ ಬದುಕಿ ಎಂದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ತಂದರು. ಆದರೂ ಇದನ್ನು ಸಹ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇನ್ನೊಬ್ಬರ ಹಿಂದೆ, ಇನ್ನೊಬ್ಬರ ಆಜ್ಜೆ, ಇನ್ನೊಬ್ಬರ ಉಚಿತ, ಇನ್ನೊಬ್ಬರನ್ನು ಬೇಡುವ ಸ್ಥಿತಿ ಹೋಗದಂತೆ ಮಾಡಿ ಉಳಿಸಿ ಗುಲಾಮರ ಸಂಖ್ಯೆ ಬೆಳೆಸುವಲ್ಲಿ ರಾಜಕೀಯ ಒಳ್ಳೆ ಯಶಸ್ಸು ಕಂಡಿದೆ. ಇದನ್ನು ನಡೆಸಲು ಅವರು ಯಾವುದೇ ಪಕ್ಷದ ಹಿಂದೆ ನಿಂತು ಯೋಜನೆ ಜಾರಿಗೆ ತರುತ್ತಾರೆ. ಯಾಕೆಂದರೆ ಅವರ ಕೈಯಲ್ಲಿ ಸಂಪತ್ತು ಇದೆ, ಅಧಿಕಾರ ಹೆಚ್ಚು ಜಾತಿ ಬಲ, ಹೆಚ್ಚು ಪ್ರಸಿದ್ದಿ ಬಲ, ಹೆಚ್ಚು ಸಾಮರ್ಥ್ಯ ಬಲ ಇದ್ದವರನ್ನು ನಿಲ್ಲಿಸಿ, ಅವರನ್ನು ತಾವು ಕೇಳುವ ಬೊಂಬೆಯಂತೆ ಮಾಡಿ, ಟಿಕೆಟ್ ಕೊಟ್ಟು, ಭಾಷಣ ಮಾಡಿಸಿ, ಜನ ಸೇರಿಸಿ, ದುಡ್ಡು ಸುರಿಸಿ ಮಂಗ ಮಾಡುವ ಪದ್ಧತಿ ಅರ್ಥವಾದರೆ ಯಾವ ಬೇರೆ ಧರ್ಮದ ಆಟವಾಗಲಿ, ಮೋಸವಾಗಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ನಮ್ಮವರೇ,ನಮ್ಮವರನ್ನು ಮೋಸ ಮಾಡುತ್ತಾ, ಅನ್ಯಧರ್ಮದ ಹೆಸರು ಹೇಳಿ ಮೋಸ ಮಾಡುವ ರಾಜಕೀಯ ವಿಧಾನ ಹೋದಾಗ ನಮ್ಮ ಧರ್ಮ ಇಡೀ ವಿಶ್ವಕ್ಕೆ ಮಾನವೀಯತೆ ಉಳಿಸುವ, ಅಮಾನವೀಯತೆ ಅಳಿಸುವ ಬಲಿಷ್ಠ ಧರ್ಮವಾಗಿ ಬೇಗನೆ ಬೆಳೆಯುವಂತೆ ಮಾಡುವುದು ಪ್ರತಿಯೊಬ್ಬನ ದೊಡ್ಡ ಜವಾಬ್ದಾರಿಯಾಗಿದೆ.