ತೆರಿಗೆ ಯಾವುದಕ್ಕೆ ಬಳಕೆ ಮಾಡಬೇಕು!
ಪ್ರತಿಯೊಬ್ಬರು ತೆರಿಗೆ ಕಟ್ಟುವರು ಆದರೆ ಆದರ ಬಳಕೆ ಹೇಗೆ? ಜನರ ಅತೀ ಅವಶ್ಯಕತೆ ಪೋರೈಸಲು ಉಪಯೋಗ ಆಗಬೇಕು. ಆದರೆ ನಿಜವಾಗಿಯೂ ಅದಕ್ಕೆ ಉಪಯೋಗ ಆಗುತ್ತಿದೆಯೇ? ಅಥವಾ ಅನವಶ್ಯಕವಾಗಿ ಖರ್ಚು ಆಗುತ್ತಿದೆಯೇ ಎಂದು ಯೋಚಿಸುವ ಭಾವನೆ ಇಲ್ಲದಾಗಿದೆ. ಹಾಗಾಗಿ ಇನ್ನೂ ಸಹ 60% ಜನರು ಅತೀ ಅವಶ್ಯಕತೆ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನು ಮಾಡುವಂತೆ ಮಾಡಿದಾಗ ಮಾತ್ರ ನಿಜವಾದ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡಬಹುದು. ಇಲ್ಲದಿದ್ದರೆ ಒಂದು ದೊಡ್ಡ ಮೂರ್ತಿ, ದೊಡ್ಡ ಸೇತುವೆ, ಪ್ರಪಂಚದಲ್ಲಿಯೇ ಅತೀ ಎತ್ತರದ ಪ್ಲೇಯ್ ಓವರ್, ಖಾಸಗಿ ರಸ್ತೆ, ಶಾಲೆ, ಆಸ್ಪತ್ರೆ, ರೈಲು, ವಿಮಾನಗಳು ಅಭಿವೃದ್ಧಿಯ ಸಂಕೇತ ಎಂದು ಬಿಂಬಿಸಿ ಸರಕಾರಕ್ಕೆ ಕಟ್ಟುವ ತೆರಿಗೆ ರಾಜಾಕರಣೆಗಳ ವೈಭವಕ್ಕಾಗಿ ಜಾಸ್ತಿ ಖರ್ಚು ಮಾಡುವಂತೆ ಆಗಿದೆ.
ಹಾಗಾದರೆ ತೆರಿಗೆ ಜನರ ಅತೀ ಅವಶ್ಯಕತೆ ಪೋರೈಕೆಗೆ ಉಪಯೋಗ ಮಾಡುವಂತೆ ಮಾಡುವುದು ಹೇಗೆ? ಮೊದಲು ಜನರಿಗೆ ಊಟ, ವಸತಿ, ವಿದ್ಯೆ, ಆರೋಗ್ಯ, ಉದ್ಯೋಗ ನೀರು ಎಷ್ಟು ಪ್ರಾಮುಖ್ಯತೆ ಇದೆ, ಇದನ್ನು ಪಡೆಯಲು ಕಷ್ಟ ಪಡುತ್ತಿರುವ ಜನರ ಗುರುತು ಪತ್ತೆ ಆಗಬೇಕು. ಆ ನಂತರ ಗ್ರಾಮದ ಮುಖಾಂತರ ಈ ಸಮಸ್ಯೆ ಪರಿಹಾರ ಆಗಬೇಕು ಹೊರತು ಎಲ್ಲೋ ದೂರದಿಂದ ಖಾತೆಗೆ 1000,2000 ಹಾಕುವುದರಿಂದ ಪರಿಹಾರ ಕಾಣಲು ಸಾಧ್ಯವಿಲ್ಲ. ಎಲ್ಲಾರಿಗೂ ಉದ್ಯೋಗ ದೊರೆಯುವಂತೆ ಆಗಬೇಕು. ಸ್ವಂತ, ಖಾಸಗಿ, ಸರಕಾರಿ ಉದ್ಯೋಗ ಆಗಿರಬಹುದು, ಜೀವನದ ಅತೀ ಅವಶ್ಯಕತೆ ದೊರೆಯುವಷ್ಟು ಸಂಭಾವನೆ ದೊರೆಯುವಂತೆ ಇರಬೇಕು. ಕೆಲವರು ಸ್ವೀಸ್ ಬ್ಯಾoಕಿನಲ್ಲಿ ಇಡುವಷ್ಟು, ಕೆಲವರು ಉದ್ಯೋಗ ಇಲ್ಲದೇ ನಿರುದ್ಯೋಗಿಯಾಗುವಂತಹ ವ್ಯತ್ಯಾಸವನ್ನು ಸಂಪತ್ತು, ಭೂಮಿ, ಅಧಿಕಾರ ಹಂಚುವ ಮುಖಾಂತರ ಆಗಬೇಕು. ಇದನ್ನು ಯಾವ ರಾಜಕೀಯ ಪಕ್ಷವು ಮಾಡದೇ ಭಾವನೆ ಮುಖಾಂತರ ಜನರನ್ನು ಮುರ್ಖರನ್ನಾಗಿ ಮಾಡಿ ಅವರನ್ನು ಹೆಚ್ಚು ಹೆಚ್ಚು ನಂಬುವಂತೆ ಮಾಡಿ ತೆರಿಗೆ ಸರಿಯಾದ ಉದ್ದೇಶಕ್ಕೆ ಬಳಕೆಯಾಗದೆ 60% ಜನರು ಅತೀ ಅಗತ್ಯತೆ ಪಡೆಯುವಲ್ಲಿ ಮೋಸ ಹೋಗಿದ್ದಾರೆ.