ರಾಜಕೀಯ ಪಕ್ಷಗಳು ನಿರ್ಮೂಲನೆ ಆಗಬೇಕು
ರಾಜಕೀಯ ಒಂದು ಸಮಸ್ಯೆ? ಉತ್ತರ ಯಾವುದು ಎಂದು ಯೋಚಿಸಬೇಕಾಗಿಲ್ಲ, ಒಂದು ದೊಡ್ಡ ಪಟ್ಟಿಯೇ ಸಿದ್ದವಾಗುತ್ತದೆ. ಜನರು ಮುಖ್ಯವಾಗಿ ಹೇಳುವುದು ಭ್ರಷ್ಟಾಚಾರ, ಅಸಮಾನತೆ, ಜಾತಿ, ಕೊಲೆ, ಅತ್ಯಾಚಾರ, ಅಧಿಕಾರದ ಆಸೆ, ಮತ್ಸರ, ದುರಾಸೆ, ಬಡತನ, ನಿರುದ್ಯೋಗ, ಆರೋಗ್ಯ ಇತ್ಯಾದಿ.
ಆದರೆ ಈ ಎಲ್ಲಾ ಸಮಸ್ಯೆಗಳ ಮೂಲ ರಾಜಕೀಯ ಆಡಳಿತ ವ್ಯವಸ್ಥೆ. ಅದಕ್ಕಾಗಿ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೆ ಈ ರಾಜಕೀಯ ಆಡಳಿತ ವ್ಯವಸ್ಥೆಯನ್ನು ತೆಗೆಯದೆ, ರಾಜಕೀಯದ ಮುಖಾಂತರ ಸರಿ ಮಾಡುತ್ತೇವೆ ಎಂದು ಅನೇಕ ಮಹಾ ಪುರುಷರು, ನಾಯಕರು, ಸಮರ್ಥರು, ಸತ್ಯವಂತರು, ಸೇವಕರು ಇನ್ನೂ ಅನೇಕ ಬಿರುದುಗಳನ್ನು ಸೃಷ್ಟಿ ಮಾಡಿ, ಮತ್ತೆ ಮತ್ತೆ ರಾಜಕೀಯವನ್ನು ಗಟ್ಟಿ ಮಾಡುತ್ತಾ ಹೋದರು ಹೊರತು ರಾಜಕೀಯ ನಾಶವಾಗಲಿಲ್ಲ. ಹಾಗಾಗಿ ಸಮಸ್ಯೆ ಹಾಗೆಯೇ ಮುಂದುವರಿಯುವಂತೆ ಆಯಿತು.
ಈ ರಾಜಕೀಯ ತೆಗೆಯುವುದು ಹೇಗೆಂದು ಅರ್ಥವಾಗುತ್ತಿಲ್ಲ ಎಂದು ಅನೇಕರ ಅಭಿಪ್ರಾಯ. ಯಾಕೆಂದರೆ ಸರಕಾರ ರಚನೆ ನಡೆಯುವುದು ರಾಜಕೀಯ ಮುಖಾಂತರ, ರಾಜಕೀಯ ಪಕ್ಷದ ಮುಖಾಂತರ ಎಂದು. ಹೌದು ರಾಜಕೀಯ ಇಲ್ಲದೇ ಯಾವುದು ನಡೆಯಲು ಸಾಧ್ಯವಿಲ್ಲ ಎನ್ನುವಷ್ಟು ಮಟ್ಟಿಗೆ ಅದನ್ನು ನಂಬುವಂತೆ ಆಗಿದೆ.ರಾಜಕೀಯ ಆಡಳಿತ ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆ ಏನೆಂದು ಎಲ್ಲಾರಿಗೂ ಗೊತ್ತಿದೆ. ಹಾಗಾಗಿ ಅದನ್ನು ಹೇಗೆ ತೆಗೆಯಬಹುದು ಎನ್ನುವ ಯೋಚನೆ ನಿಜವಾಗಿಯೂ ಪ್ರಾರಂಭ ಆದಾವರಿಗೆ ಖಂಡಿತ ಪರಿಹಾರ ಇದೆ. ಅದಕ್ಕಾಗಿ ಪ್ರಜಾಕೀಯ ಎನ್ನುವ ಪಕ್ಷದ ವಿಚಾರ ಮಾತ್ರ ತಿಳಿಯಿರಿ, ಒಪ್ಪಬೇಕಾಗಿಲ್ಲ. ಯಾಕೆಂದರೆ ಪ್ರಜಾಕೀಯ ವಿಚಾರಕ್ಕಿಂತ ಉತ್ತಮ ವಿಚಾರ ಇನ್ನೂ ಇರಬಹುದು, ಅದು ಪ್ರಜಾಪ್ರಭುತ್ವವನ್ನು ಇನ್ನೂ ಶುದ್ಧ ಮಾಡಬಹುದು. ಆದರೆ ಇದು ಒಬ್ಬರು, ಕೆಲವರಿಂದ ಆಗುವ ಬದಲಾವಣೆ ಅಲ್ಲ. ಎಲ್ಲಾರೂ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕಾದರೆ ಅಧಿಕಾರ ಮತ್ತು ಜವಾಬ್ದಾರಿ ತೆಗೆದುಕೊಳ್ಳಲು ತಯಾರಿ ಇರಬೇಕು. ಇಲ್ಲಿ ಪಕ್ಷವನ್ನು ಗೆಲ್ಲಿಸುವ, ವ್ಯಕ್ತಿಯನ್ನು ಗೆಲ್ಲುಸುವ ಜವಾಬ್ದಾರಿ ಅಲ್ಲ, ವಿಚಾರಕ್ಕೆ ಬದ್ದ ಇರುವ ಯಾವ ಪಕ್ಷ, ಯಾವ ವ್ಯಕ್ತಿಗಾದರೂ ವೋಟು ಹಾಕಿ ಕೆಲಸಗಾರನನ್ನಾಗಿ ಮಾಡುವ ಜವಾಬ್ದಾರಿ, ಅಧಿಕಾರ ಪ್ರಜೆ ಪಡೆದಾಗ ರಾಜಕೀಯ ತನ್ನಷ್ಟಕ್ಕೆ ನಾಶವಾಗುತ್ತದೆ. ಇದನ್ನು ಮಾಡುತ್ತೇವೆ ಎನ್ನುವವರಿಗೆ ಪಕ್ಷ, ವ್ಯಕ್ತಿ, ಜಾತಿ, ಧರ್ಮ ನೋಡದೆ ಮತ ಹಾಕುವ ಪ್ರಜ್ಜವಂತ ಪ್ರಜೆಗಳು ಹೆಚ್ಚಾದಾಗ ಸಾಧ್ಯ.