ನೀವೇ ಒಮ್ಮೆ ನಾಯಕನಾಗಿ ನೋಡಿ
ಪ್ರಶ್ನೆ : ನಾಯಕ ಬೇಕೆ, ಬೇಡವೇ?
ಉತ್ತರ :ತಾನೇ ನಾಯಕನಾದರೆ ತನಗೆ ನಾಯಕನ ಅಗತ್ಯ ಇಲ್ಲ.ಆದರೆ ತಾನು ನಾಯಕ ಎನ್ನುವ ಜವಾಬ್ದಾರಿ ತೆಗೆದುಕೊಳ್ಳಲು ತಯಾರಿ ಇಲ್ಲ, ಅದಕ್ಕಾಗಿ ಇನ್ನೊಬ್ಬ ನಾಯಕ ಬೇಕೆಂದು ಬಯಸುತ್ತೇವೆ.ಹಾಗಾಗಿ ಒಬ್ಬ ನಾಯಕನಿಗೆ ಇನ್ನೊಬ್ಬ ನಾಯಕ ಬೇಕಾಗಿಲ್ಲ. ಅಂಬೇಡ್ಕರ್ ಅವರು ಅದಕ್ಕಾಗಿ ಎಲ್ಲಾ ಪ್ರಜೆಗಳು ನಾಯಕರಾಗಿ ಅಂದರೆ ನಾಯಕ ತೆಗೆದುಕೊಳ್ಳುವಷ್ಟು ಜವಾಬ್ದಾರಿ,ವ್ಯವಸ್ಥೆ, ಗೌರವ ಎಲ್ಲರೂ ಪಡೆಯಿರಿ ಎನ್ನುವ ದೃಷ್ಟಿಯಿಂದ ಪ್ರಜಾಪ್ರಭುತ್ವ ಆಡಳಿತ ಬರುವಂತೆ ಮಾಡಿದರು. ಇಷ್ಟರವರೆಗೆ ಯಾರನ್ನು ನಾಯಕ ಎಂದು ನಂಬಿದ್ದಿರೋ ಅವರನ್ನು ಕೆಲಸಗಾರರನ್ನಾಗಿ ಮಾಡಬೇಕು. ಯಾಕೆಂದರೆ ಅವನಿಗೆ ಸಂಬಳ, ಕಾರು, ವಿಮಾನ, ಸಹಾಯಕ್ಕೆ ಜನ, ರಕ್ಷಣೆಗೆ ಜನ ಇಟ್ಟುಕೊಂಡು ರಾಜನಂತೆ ಮೆರೆಯುತ್ತಿರುವುದು ನಮ್ಮ ತೆರಿಗೆ ಹಣದಿಂದ. ಹಾಗಾದರೆ ನಾಯಕ ಯಾರು? ಕೆಲಸಗಾರ ಯಾರು?
ಇದು ಬಹಳ ಸುಲಭದಲ್ಲಿ ಅರ್ಥವಾಗುವ ವಿಚಾರ. ಆದರೆ ಕೆಲವರು ಅರ್ಥವಾಗದಂತೆ ಮಾಡುತ್ತಾರೆ. ನಾಯಕನಿಲ್ಲದೆ ಒಂದು ದೇಶ ನಡೆಯುವುದು ಹೇಗೆ? ಒಂದು ಶಾಲೆಗೆ ಪ್ರಿನ್ಸಿಪಾಲ್, ಒಂದು ಕಂಪನಿಗೆ ಮ್ಯಾನೇಜರ್, ಒಂದು ಸೈನ್ಯಕ್ಕೆ ಕಮಂಡರ್, ಒಂದು ವಾಹನಕ್ಕೆ ಡ್ರೈವರ್ ಇದ್ದ ಹಾಗೆ ಎಂದು. ನಾಯಕನಿಲ್ಲದ ವ್ಯವಸ್ಥೆ ದಾರ ಇಲ್ಲದಾ ಗಾಳಿಪಠದಂತೆ ಎನ್ನುವ ಭಾಷಣ ಕೇಳಿದಾಗ ಹೌದು ಅನಿಸುತ್ತದೆ. ಹೌದು, ಆದರೆ ಒಂದು ಡ್ರೈವರ್ ಉಳಿದ ಪ್ರಯಾಣಿಕರ ಅನುಕೂಲತೆಗೆ ಹೊರತು ಡ್ರೈವರ್ ಗೆ ಖುಷಿ ಬಂದಲ್ಲಿ ಹೋಗಲು ಅಲ್ಲ.ದಾರ ಇಲ್ಲದಾ ಗಾಳಿಪಠ ಅಲ್ಲ. ದಾರ ಹಿಡಿದವನು ನಿಯಂತ್ರಣ ಮಾಡುವ ಗಾಳಿಪಠ ಆಗಬೇಕು. ಹಾಗಾಗಿ ನಾಯಕ ಎಂದು ಎನಿಸಿದವನ ಜವಾಬ್ದಾರಿಗೆ ನಾವು ದುಡಿದ ತೆರಿಗೆ ಹಣ ಕೊಟ್ಟು ಸುಮ್ಮನೆ ಇರುವಂತೆ ಮಾಡಿರುವುದು ನಾಯಕನ ಬುದ್ದಿವಂತಿಕೆ. ಹಾಗಾಗಿ ನಮ್ಮ ತೆರಿಗೆ ಹಣದಿಂದ ಸರಿಯಾದ ಕೆಲಸ ನಮಗೆ ದೊರಕಬೇಕಾದರೆ ಅವನನ್ನು ನಾಯಕ ಎಂದು ಪೂಜೆ ಮಾಡಿದರೆ ನಮ್ಮ ಉಪಯೋಗಕ್ಕೆ ಆ ತೆರಿಗೆ ಸಿಕ್ಕಲು ಸಾಧ್ಯವಿಲ್ಲ. ಅವನನ್ನು ನಮ್ಮ ತೆರಿಗೆಯ ಸಮರ್ಪಕ ಕೆಲಸ ನಡೆಸಲು ನೇಮಕ ಮಾಡಿದ ನಮ್ಮೆಲ್ಲರ ಕೆಲಸಗಾರ ಹೊರತು ನಾಯಕ ಖಂಡಿತ ಅಲ್ಲ. ಹಾಗಾಗಿ ಪ್ರಜಾಪ್ರಭುತ್ವ ಆಡಳಿತದಲ್ಲಿ ಪ್ರಜೆಗಳು ನಾಯಕರು, ಜನಪ್ರತಿನಿದಿನಗಳು ಕೆಲಸಗಾರರು ಎನ್ನುವ ಸತ್ಯವನ್ನು ರಾಜಕೀಯ ಬಹಳವಾಗಿ ಮರೆಮಾಚಿದೆ.
ಹಾಗಾಗಿ ತೆರಿಗೆ ಕಟ್ಟುವ ಪ್ರಜೆಗಳೆಲ್ಲರೂ ನಾಯಕನ ಸ್ಥಾನದಲ್ಲಿ ನಿಂತು ಜವಾಬ್ದಾರಿ ತೆಗೆದುಕೊಳ್ಳುವoತೆ ಆದಾಗ ನಿಜವಾದ ಪ್ರಜಾಪ್ರಭುತ್ವ ದೇಶದ ಪ್ರಭು ಪ್ರಜೆಯಾಗಿ ಅಭಿವೃದ್ಧಿ ಹೊಂದುತ್ತಾನೆ. ಇಲ್ಲದಿದ್ದರೆ ನಾಯಕನ ಹಿಂದೆ ಹೋಗುವ ಗುಲಾಮರಾಗಿ ಉಳಿಯುವಂತೆ ಮಾಡುವ ರಾಜಕೀಯ ನಡೆಯುತ್ತದೆ.