ದೇಶದ ಸಂಪತ್ತು ಹಂಚಿಕೆ ಹೇಗೆ?
ಭಾರತ ದೇಶ ಬಹಳ ಶ್ರೀಮಂತ ದೇಶ. ಈಗ ಆರ್ಥಿಕವಾಗಿ ನಾಲ್ಕನೇ ಸ್ಥಾನದಲ್ಲಿ ಇದೆ. ಹಾಗಾದರೆ ಈ ಸಂಪತ್ತು ಯಾರ ಕೈಯಲ್ಲಿ ಇದೆ?ಶೇಕಡಾ 90 ಜನರಲ್ಲಿ ಕೇಳಿದರು, ನನಗೆ ಸಾಲ ಇದೆ, ಲೋನ್ ಕಟ್ಟಲು ಕಷ್ಟವಾಗುತ್ತಿದೆ, ದುಡ್ಡು ಇಲ್ಲ, EMI ಕಟ್ಟಲು ಸಾಧ್ಯವಾಗದೆ ಆತ್ಮಆತ್ಯೆ ಪ್ರಕರಣಗಳು ಹೆಚ್ಚಾಗುತ್ತಾ ಇದೆ.ರೋಗ ಬಂದರೆ ಸರಿಯಾದ ಚಿಕ್ಸಿತ್ಸೆ ಪಡೆಯಲು ದುಡಿಲ್ಲದೆ ಮಾರ್ಯಾದೆ ಬಿಟ್ಟು ಫೇಸ್ಬುಕ್, ವಾಟ್ಸಪ್ ಗಳಲ್ಲಿ ಬೇಡಿ ಆಳುವುದನ್ನು ಕಾಣಬಹುದು. ವಿದ್ಯೆ ಪಡೆಯಲು ಲೋನ್ ಮಾಡುವುದು, ಮನೆ ಕಟ್ಟಲು ಲೋನ್, ವಾಹನ ಲೋನ್, ಇನ್ನೂ ಮೊಬೈಲ್ ಖರೀದಿ ಗೂ ಲೋನ್, ಕಡೆಗೆ ಇನ್ನೂ ದಿನಸಿ ಸಮಾಗ್ರಿ ಖರೀದಿಗೆ ಲೋನ್ ಸೌಲಭ್ಯ ದೊರೆತು ನಾನು ಶ್ರೀಮಂತ ಎಂದು ಹೆಮ್ಮೆ ಪಡುವ ಕಾಲ ದೂರ ಇಲ್ಲ.
ಹಾಗಾದರೆ ಭಾರತ ಶ್ರೀಮಂತ ರಾಷ್ಟ್ರ ಎಂದು ಹೇಳುವುದು ಯಾರ ಸಂಪತ್ತು ನೋಡಿ?ಸ್ವೀಸ್ ಬ್ಯಾಂಕ್ ಹಣ ಮೂರು ಪಟ್ಟು ಜಾಸ್ತಿ ಆಗಿದೆ, ಅದರ ಆಧಾರದಲ್ಲಿ ಇಡೀ ದೇಶದ ಶ್ರೀಮಂತಿಕೆ ಅಳತೆ ಮಾಡುವುದೇ? ಕಪ್ಪು ಹಣದ ಆಧಾರದ ಮೇಲೆಯೇ? ಅಥವಾ ಎಲ್ಲಾರ ಆರ್ಥಿಕ ಸ್ಥಿತಿ ನೋಡಿ ಅಳತೆ ಮಾಡುವುದೇ?
ಎಲ್ಲಾರ ಆರ್ಥಿಕ ಮಟ್ಟ ನೋಡಿ ದೇಶದ ಆರ್ಥಿಕ ಸ್ಥಿತಿ ಅಳತೆಯಾಗಬೇಕು ಹೊರತು 10% ಅಗರ್ಭ ಶ್ರೀಮಂತರ ಸ್ವೀಸ್ ಬ್ಯಾಂಕ್, ಕಪ್ಪು ಹಣ, ಲೆಕ್ಕವಿಲ್ಲದಷ್ಟು ಭೂಮಿ, ಖಾಸಗಿ ಶಾಲೆ, ಆಸ್ಪತ್ರೆ, ಕಂಪನಿಗಳ ಸಾಮರ್ಥ್ಯ ದೇಶದ ಆರ್ಥಿಕತೆಯ ಅಳತೆ ಕೋಲು ಅಲ್ಲ.ಪ್ರತಿ ವ್ಯಕ್ತಿಯ ಆರ್ಥಿಕ ಮಟ್ಟವನ್ನು ಮೇಲೆ ತರುವುದು ಮುಖ್ಯವಾಗಿದೆ. ಅದಕ್ಕಾಗಿ 10% ಜನರ ಕೈಯಲ್ಲಿ ಕೊಳೆಯುತ್ತಿರುವ ಸಂಪತ್ತು ಉಳಿದ 90% ಜನರಿಗೂ ಹಂಚುವಂತೆ ಮಾಡುವುದು ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯ ಮೊದಲ ಅಭಿವೃದ್ಧಿಯಾಗಿದೆ. ಸಂಪತ್ತು ಹಂಚುವುದು ಎಂದರೆ ಉಚಿತವಾಗಿ ಹಂಚುವುದು ಅಲ್ಲ. ಪ್ರತಿ ಪ್ರಜೆ ನಿರ್ದಿಷ್ಟ ಸಮಯ ದುಡಿದು, ತನ್ನ ಜೀವನ ನಿರ್ವಹಣೆ ಸಾರಾಗವಾಗಿ ಮಾಡುವಂತೆ ಮಾಡುವುದು ಆಗಿದೆ. ಕೆಲವರು ಕಷ್ಟ ದುಡಿಯುವುದು, ಕೆಲವರು, ಕೆಲವರು ಡೋಂಗಿ ಮಾಡಿ ತಿನ್ನುವುದು, ಕೆಲವರು ಕೂಡಿಟ್ಟ ದುಡ್ಡಿನಿಂದ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು, ಕೆಲವರು ಇನ್ವೆಸ್ಟ್ ಮಾಡಿ ಲೆಕ್ಕಕ್ಕಿಂತ ಜಾಸ್ತಿ ಲಾಭ ಹೊಡೆದು ಕೊಳ್ಳೆ ಹೊಡೆಯುವ ಮುಖಾಂತರ ಜೀವನ ಸಾಗಿಸುವಂತೆ ಆಗಿದೆ. ಈ ವ್ಯತ್ಯಾಸ ಹೋಗಲಾಡಿಸಲು ಸಂಪತ್ತು, ಭೂಮಿ, ಅಧಿಕಾರ, ಗೌರವ ಎಲ್ಲಾರಿಗೂ ಹಂಚುವಂತೆ ಮಾಡಬೇಕಾಗಿದೆ. ಅದುವೇ ನಿಜವಾದ ಪ್ರಜಾಪ್ರಭುತ್ವ. ಇದರ ವ್ಯತ್ಯಾಸದಿಂದ ಇಂದು ಯುದ್ಧ, ಕೊಲೆ, ಪೈಪೋಟಿ, ದ್ವೇಷ, ರಾಜಕೀಯ ನಡೆಯುವಂತೆ ಆಗಿದೆ.