ಎಲ್ಲದಕ್ಕೂ ಅಂತ್ಯ ಇದೆ!
ಅಂತ್ಯ ಎನ್ನುವುದು ಮುಖ್ಯ. ಅದು ಯುದ್ಧ ಆಗಿರಬಹುದು, ಸಮಸ್ಯೆ ಆಗಿರಬಹುದು, ಗಡಿ ಹಂಚುವಿಕೆ ಆಗಿರಬಹುದು ಎಲ್ಲವೂ ಅಂತ್ಯ ಕಾಣುವಂತೆ ಆಗಬೇಕು. ಅದಕ್ಕಾಗಿ ವಿಶ್ವ ಸಂಸ್ಥೆ ಹುಟ್ಟಿಕೊಂಡಿದೆ. ಆದರೆ ಅದರ ಬಲ ಕಡಿಮೆಯಾಗಿದೆ, ಅದರ ಮಾತಿಗೆ ಬೆಲೆ ಇಲ್ಲ.ಹಾಗಾಗಿ ಈ ಎಲ್ಲಾ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದೆ. ಭಾರತ ಇನ್ನೂ ಸಹ ಖಾಯಂ ಸದಸ್ಯತ್ವ ಹೊಂದಲು ಸಾಧ್ಯವಾಗಲಿಲ್ಲ. ವಿಶ್ವ ಸಂಸ್ಥೆ ಎನ್ನುವುದು ಎಲ್ಲಾ ದೇಶಗಳ ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಬೇಕು. ಕೇವಲ ಬಲಿಷ್ಠ ರಾಷ್ಟ್ರಗಳ ಗುಂಪು ಮಾತ್ರವಾಗಬಾರದು. ಇಡೀ ವಿಶ್ವ ಒಂದಾಗಿ ನಡೆಯಬೇಕು. ಪರಸ್ಪರ ಕೊಡು ಕೊಳ್ಳುವಿಕೆ ಮುಖಾಂತರ ಹೊಂದಾಣಿಕೆ ಅತೀ ಮುಖ್ಯ.
ಈಗ ದೈನಂದಿನ ಬಳಕೆಗೆ ಉಪಯೋಗಿಸುವ ವಿದ್ಯುತ್, ಬಲ್ಬು, ಪೆಟ್ರೋಲ್, ಗ್ಯಾಸ್, ವಾಹನ, ಫೋನ್, ಇಂಟರ್ನೆಟ್, ಕಂಪ್ಯೂಟರ್ ಎಲ್ಲವೂ ಬೇರೆ ಬೇರೆ ದೇಶದ ಕೊಡುಗೆಯಾಗಿದೆ. ಹಾಗಾಗಿ ನಮ್ಮದು ಮಾತ್ರ ಶ್ರೇಷ್ಠ, ನಾವೇ ಶ್ರೇಷ್ಠ ಎಂದು ಬಿಂಬಿಸಿ ಉಪಯೋಗ ಇಲ್ಲ. ಎಲ್ಲಾರೂ ಶ್ರೇಷ್ಠರಾಗಬೇಕು ಎನ್ನುವುದು ಮುಖ್ಯ. ಈ ಭಾವನೆ ಇಲ್ಲದೇ ಧರ್ಮ, ಜಾತಿ, ಆರ್ಥಿಕ ಮಟ್ಟ, ಬಣ್ಣದ ಅಳತೆಯಲ್ಲಿ ವ್ಯತ್ಯಾಸ ಸರಿ ಅಲ್ಲ.
ಮಾನವೀಯತೆ ಮತ್ತು ಅಮಾನವೀಯತೆ ವ್ಯತ್ಯಾಸ ತಿಳಿಯುವುದು ಅತೀ ಮುಖ್ಯ. ಅದರ ಆಧಾರದಲ್ಲಿ ಗೌರವದ ಅಳತೆ ಆಗಬೇಕು. ಒಂದು ಪ್ರಾಣಿಯನ್ನು ಕೊಂದು ತಿನ್ನುವಾಗ ಆ ಪ್ರಾಣಿ ಕೊಲ್ಲುವಾಗ ಅನುಭವಿಸಿದ ನೀವು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಮಾನವೀಯತೆ ಎಷ್ಟು ಮುಖ್ಯ ಎಂದು ತಿಳಿಯಬಹುದು.
ಈಗ ಪ್ರತಿಯೊಂದು ಕ್ಷೇತ್ರ ಮೋಸ, ವಂಚನೆ, ಹಿಂಸೆ, ಟೀಕೆ, ದ್ವೇಷ, ಕಷ್ಟ ಇಲ್ಲದೇ ಯಾವುದು ಇಲ್ಲ ಎನ್ನುವಂತೆ ಆಗಿದೆ. ಒಂದು ದೇಶದ ಶ್ರೇಷ್ಠತೆ ಮಾನವೀಯತೆ, ಸಮಾನತೆ, ಏಕತೆ ಮುಖಾಂತರ ಗುರುತಿಸಬೇಕು ಹೊರತು ಆ ದೇಶದ 10% ಜನರ ಶ್ರೀಮಂತಿಕೆ ನೋಡಿ ಆರ್ಥಿಕತೆ ನಂಬರ್ ಒನ್ ಎನ್ನುವ ಹೆಗ್ಗಳಿಕೆಗೆ ಖುಷಿ ಪಟ್ಟು ಪ್ರಯೋಜನ ಇಲ್ಲ. ಒಂದು ದೇಶ ಎಷ್ಟು ಪರಮಾಣು ಬಾಂಬ್ ಹೊಂದಿದೆ ಎನ್ನುವ ಲೆಕ್ಕಾಚಾರದಲ್ಲಿ ದೇಶದ ಸಮರ್ಥತೆ ಅಳತೆ ಅಲ್ಲ, ಆ ದೇಶದ ಪ್ರಜೆಗಳು ಹೇಗೆ ಒಗ್ಗಟ್ಟಾಗಿದ್ದಾರೆ ಎನ್ನುವುದು ಮುಖ್ಯ. ಒಂದು ದೇಶದ ನಾಯಕನ ಗುಣಕ್ಕಿಂತ ಅಲ್ಲಿನ ಪ್ರಜೆಗಳ ಒಳ್ಳೆಯ ಗುಣ ಅತೀ ಮುಖ್ಯ. ಇದನ್ನು ಸಾಧಿಸಿದಾಗ ಮಾತ್ರ ಶಾಶ್ವತ ಪರಿಹಾರ.