ಪ್ರಜಾಪ್ರಭುತ್ವ ಉದ್ದೇಶವು ಈಡೇರಿಕೆ ಆಗಿಲ್ಲ
ನಮ್ಮ ಮನೆಯಲ್ಲಿ ದೊಡ್ಡ ದೊಡ್ಡ ಆಯುಧ ಇದ್ದಷ್ಟು ನಾವು ಸುರಕ್ಷಿತರು ಎನ್ನುವ ಮಟ್ಟಿಗೆ ಆಗುವಂತೆ ಆಗಿದೆ. ಆಚೆ ಮನೆಯವನಲ್ಲಿ ಅಣು ಬಾಂಬ್ ಇದೆ.ಹಾಗಾಗಿ ನಾನು ಹೊಂದಿರಬೇಕು.ಮನೆಯಲ್ಲಿ ಊಟಕ್ಕೆ ಗತಿ ಇಲ್ಲದಿದ್ದರೂ ತೊಂದರೆ ಇಲ್ಲ, ದೊಡ್ಡ ದೊಡ್ಡ ಅಣು ಬಾಂಬ್ ಇದ್ದಷ್ಟು ಹೆಚ್ಚು ಗೌರವ, ಹೆಚ್ಚು ರಕ್ಷಣೆ ಎನ್ನುವಂತೆ ಮಾಡಿದೆ ನಮ್ಮ ರಾಜಕೀಯ ಆಡಳಿತ ವ್ಯವಸ್ಥೆ. ಈ ರಾಜಕೀಯ ಆಡಳಿತ ಭಾರತದಲ್ಲಿ ಮಾತ್ರ ಅಲ್ಲ, ಇಡೀ ಪ್ರಪಂಚವನ್ನೇ ಕಷ್ಟಕ್ಕೆ ಸಿಲುಕಿಸಿದೆ.
ಈ ರೀತಿಯ ವ್ಯವಸ್ಥೆಗೆ ಮುಖ್ಯ ಕಾರಣ ಅಧಿಕಾರ, ಸಂಪತ್ತು, ಭೂಮಿಯ ಒಡೆತನದ ಮುಖಾಂತರ ಗೌರವ, ವ್ಯವಸ್ಥೆ, ಹೆಗ್ಗಳಿಕೆ ಪಡೆಯಲು ಮಾತ್ರ.ಹಾಗಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಮೊದಲು ಅಧಿಕಾರ, ಸಂಪತ್ತು, ಭೂಮಿ, ಗೌರವ ಎಲ್ಲಾರಿಗೂ ಹಂಚುವಂತೆ ಮಾಡಬೇಕು. ಅದು ಮಾಡದೇ ಕೇವಲ 10% ವರ್ಗ ಅದನ್ನು ಪಡೆಯುವಂತೆ ಮಾಡಿ, ಉಳಿದ 90% ಜನರು ಅವರನ್ನು ಬೇಡಿ ಬದುಕುವಂತೆ ಮಾಡಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.ಯಾರು ಅನ್ಯಾಯ, ಮೋಸ, ಕೊಲೆ ಮಾಡುತ್ತಾರೋ ಅಂತವರಿಗೆ ಹಿಂದೆ ಮುಂದೆ ನೋಡದೆ ಮನುಷ್ಯ ಜಾತಿಯಿಂದ ಹೊರಗಡೆ ಇಡುವ ಮೃಗಾಲಯ ತೆರೆಯಬೇಕು. ಅಂತವರ ಬದುಕು ಆ ಮೃಗಾಲಯದಲ್ಲಿಯೇ ಕೊನೆಗೊಳ್ಳಬೇಕು. ಹಾಗಾಗಿ ಎಲ್ಲಾ ಮಾನವೀಯತೆ ಹೊಂದಿರುವ ಮನುಷ್ಯರಿಗಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಬಂದಿರುವುದು. ಇದನ್ನು ಸರಿಯಾಗಿ ಜಾರಿಗೆ ಮಾಡದಿರುವುದು ಎಲ್ಲಾ ಅನ್ಯಾಯ, ಮೋಸ, ಹಿಂಸೆ, ಕೊಲೆಗೆ ಕಾರಣವಾಗಿದೆ.
ನಿಜವಾದ ಪ್ರಜಾಪ್ರಭುತ್ವ ಆಡಳಿತ ಯಾಕಾಗಿ ಜಾರಿಗೆ ತಂದರೋ ಅದರ 5% ಉದ್ದೇಶ ಹಿಡೇರಲಿಲ್ಲ. ಕೇವಲ ವೋಟು ಹಾಕುವುದು ನಿಜವಾದ ಪ್ರಜಾಪ್ರಭುತ್ವ ಆಡಳಿತವೇ? ಆ ನಂತರ ನ್ಯೂಸ್ ನೋಡಿಕೊಂಡು ದೂರದಿಂದ ಅವನ ಭಾಷಣ, ಅವನ ಶಂಕುಸ್ಥಾಪನೆ, ಅವನ ರ್ಯಾಲಿ ನೋಡಿಕೊಂಡು ಇರುವುದು ಪ್ರಜೆಯ ಕೆಲಸವೇ? ಅಥವಾ ನಾವು ಕಟ್ಟಿರುವ ತೆರಿಗೆ ಹೇಗೆ ಉಪಯೋಗ ಆಗುತ್ತಿದೆ, ಅದರ ಲೆಕ್ಕಾಚಾರ ಪ್ರತಿ ದಿನ ನನ್ನ ಮೊಬೈಲ್ ಗೆ ಬರುವಂತೆ ಮಾಡಬೇಕು,ಯಾವ ಕೆಲಸ ಎಲ್ಲಿ, ಯಾರು ಮಾಡುತ್ತಿದ್ದಾರೆ ಎನ್ನುವ ವಿವರಣೆ ಕೊಡುವ ಕೆಲಸ ಜನಪ್ರತಿನಿಧಿ ಸರಿಯಾಗಿ ಮಾಡುತ್ತಾನೆಯೇ ಎನ್ನುವ ಜವಾಬ್ದಾರಿ ಇರಬೇಕು. ಅದನ್ನು ಸರಿಯಾಗಿ ಮಾಡದಿದ್ದರೆ ಮಾಡಿಸುವ ಅಧಿಕಾರ ಪ್ರಜೆ ಪಡೆಯಬೇಕು ಅದನ್ನು ಪಡೆಯುವುದು ನಿಜವಾದ ಪ್ರಜಾಪ್ರಭುತ್ವ.