ಎಲ್ಲವೂ ನಮ್ಮ ಕೈಯಲ್ಲೇ ಇದ್ದರೂ ನಾವು ಬೇರೆಯವರಿಗೆ ಬಯ್ದುಕೊಂಡು ಓಡಾಡುತ್ತೇವೆ
ನಾವು ಬೇರೆಯವರಿಗೆ ಬಯ್ದುಕೊಂಡು ಓಡಾಡುತ್ತೇವೆ ಆದರೆ ಪ್ರತಿಯೊಬ್ಬ ಪ್ರಜೆಯೂ ಪಡೆಯುತ್ತಿರುವ ವ್ಯವಸ್ಥೆಯನ್ನು ತೋರಿಸಿ ತನ್ನ ದೇಶದ ಸಾಮರ್ಥ್ಯ ಪ್ರದರ್ಶನ ನಡೆಯಬೇಕು, ತನ್ನ ದೇಶದ ಪ್ರತಿ ಪ್ರಜೆಯ ಗುಣದ ಆಧಾರದಲ್ಲಿ ದೇಶದ ಒಳ್ಳೆಯತನ ಪ್ರದರ್ಶನ ಆಗಬೇಕು, ಪ್ರತಿ ಪ್ರಜೆಯ ಆರ್ಥಿಕ ಸ್ಥಿತಿ ದೇಶದ ಶ್ರೀಮಂತಿಕೆಯ ಮಾಪಾನ ಆಗಬೇಕು. ಮಾನವೀಯತೆ ಆಧಾರದಲ್ಲಿ ಆ ದೇಶದ ಉಳಿವು ಅಳಿವಿನ ನಿರ್ಧಾರ ಆಗಬೇಕು ಹೊರತು ಎಷ್ಟು ಅಣು ಬಾಂಬ್ ಗಳು ಇವೆ, ಎಷ್ಟು ಯುದ್ಧ ವಿಮಾನಗಳಿವೆ ಎನ್ನುವ ಆಧಾರದಲ್ಲಿ ಅಲ್ಲ.
ಪರಸ್ಪರ ದ್ವೇಷ, ಪೈಪೋಟಿ, ಹಿಂಸೆ ಹೆಚ್ಚಿ ಮನುಷ್ಯ ಮನುಷ್ಯನನ್ನು ಕೊಂದು ಪಡೆಯುವಂತೆ ಆಗಿದೆ. ಇದರಿಂದ ಯಾವುದೇ ಅಂತಿಮ ಪರಿಹಾರ ಕಾಣಲು ಸಾಧ್ಯವಿಲ್ಲ. ಆಹಾರ, ವಸತಿ, ವಿದ್ಯೆ, ಆರೋಗ್ಯ, ಉದ್ಯೋಗ ಪಡೆಯಲು ಮಾಡುವ ಉದ್ಯಮ ಸೃಷ್ಟಿ ಆಗುವಂತೆ ಮಾಡಬೇಕು ಹೊರತು ಮನುಷ್ಯನನ್ನು ಅಪಾಯದ ಸ್ಥಿತಿಗೆ ನಿಲ್ಲಿಸುವ ಯುದ್ಧ ಸಾಮಾಗ್ರಿ, ರೋಗ, ಉದ್ಯೋಗ ಸೃಷ್ಟಿ ಮಾಡುವ ಉದ್ಯೋಗ ಒಬ್ಬ ನಿಗೆ ಬದುಕು ಕೊಟ್ಟು ಸಾವಿರ ಜನರನ್ನು ಕೊಲ್ಲುವ ಉದ್ಯೋಗ ನಡೆಯುವಂತೆ ಆಗಿದೆ.
ಅತ್ಯಂತ ಹೆಚ್ಚು ಬಲಶಾಲಿ ತನ್ನ ಧರ್ಮ, ತನ್ನ ದೇಶ ಎನ್ನುವುದಕ್ಕಿಂತ ಅತ್ಯಂತ ಮಾನವೀಯತೆ ತೋರಿಸುವ ಧರ್ಮ, ಅತ್ಯಂತ ಸಂಪತ್ತು ಹಂಚಿರುವ ದೇಶ ನಮ್ಮದು ಎನ್ನುವಂತೆ ಆಗಬೇಕು. ಮುಂದೆ ಇಂತಹ ಸ್ಥಿತಿ ನಿರ್ಮಾಣವಾಗದಂತೆ ಮಾಡಲು ಪ್ರಜಾಪ್ರಭುತ್ವ ಒಂದೇ ದಾರಿ.90% ಮಾನವೀಯತೆ ಇರುವವರ ಕೈಗೆ ಅಧಿಕಾರ, ಸಂಪತ್ತು, ಗೌರವ ಹೋಗುವಂತೆ ಮಾಡಿದಾಗ ಮಾತ್ರ ಸಾಧ್ಯ. ಇಲ್ಲದಿದ್ದರೆ 10% ನಾಯಕ ಎಂದು ಹೇಳುವ ವರ್ಗ ತಮಗೆ ಅನುಕೂಲ ಆಗುವಂತೆ ಎಲ್ಲವನ್ನು ಕಂಟ್ರೋಲ್ ಮಾಡುವ ರಾಜಕೀಯ ಆಡಳಿತ ನಡೆಯುತ್ತದೆ. ಇದು ಸಮಸ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವುದಿಲ್ಲ. ಒಬ್ಬ ಪ್ರಧಾನಿ, ಒಬ್ಬ ಮುಖ್ಯಮಂತ್ರಿ, ಒಬ್ಬ ಶಾಸಕ ಒಳ್ಳೆಯವ ಬಂದಿದ್ದಾನೆ ಇನ್ನೆಲ್ಲಾ ಸರಿಯಾಗುತ್ತದೆ ಎನ್ನುವ ಭ್ರಮೆ ಹುಟ್ಟಿಸಿ ಆಡಳಿತ ರಾಜಕೀಯದ ಕೈಯಲ್ಲಿ ಇರುವಂತೆ ಮಾಡುವ ರಾಜಕೀಯ ಆಟ ಅರ್ಥ ಮಾಡಿಕೊಳ್ಳಬೇಕು.
ತನ್ನ ಕೈಗೆ ಅಧಿಕಾರ ಬಂದಾಗ ಮಾತ್ರ ಸರಿ ಮಾಡಲು ಸಾಧ್ಯ ಎನ್ನುವ ಪ್ರಜ್ಜೆ ಪ್ರತಿ ಪ್ರಜಾಪ್ರಭುತ್ವ ದೇಶದಲ್ಲಿನ ಪ್ರಜೆಯಲ್ಲಿ ಬಂದಾಗ ಖಂಡಿತ ಅದ್ಭುತ ಬೆಳವಣಿಗೆ ಕಾಣಲು ಸಾಧ್ಯ, ಶಾಶ್ವತ ಪರಿಹಾರ ಕಾಣಲು ಸಾಧ್ಯ.