ಜೀವನದ ಪಾಠವಾದ ಮಾನವೀಯ ಸಂಬಂಧದ ಪಾಠ ಮುಖ್ಯ
ಕನ್ನಡ, ವಿಜ್ಜಾನ, ಗಣಿತ, ಸಮಾಜ, ಇಂಗ್ಲೀಷ್ ಎನ್ನುವ ಪಾಠ ಕಲಿಯುವ ಮೊದಲು, ಜೀವನದ ಪಾಠವಾದ ಮಾನವೀಯ ಸಂಬಂಧದ ಪಾಠ ಮುಖ್ಯವಾಗಿ ಕಲಿಸುವ ಅಗತ್ಯ ಇದೆ. ಈಗ ಹೆಚ್ಚು ಹೆಚ್ಚು ಕೊಲೆಗಳು ನಡೆಯುತ್ತಿದೆ. ಅದು ವಿಚಿತ್ರ ರೀತಿಯಲ್ಲಿ. ಮನುಷ್ಯತ್ವವೇ ಸತ್ತು ಹೋಗಿದೆಯೇ ಎನ್ನುವ ರೀತಿ ನಡೆಯುತ್ತಿದೆ. ನ್ಯೂಸ್ ಪೇಫರ್ ನ ಒಂದು ಫೇಜ್ ಕೊಲೆ, ಸತ್ತಾವರ ಫೇಜ್ ಆಗಿದೆ. ಆದರೆ ಇದು ಒಂದು ನ್ಯೂಸ್ ಆಗಿತ್ತು, ಈಗ ಬಹಳ ಹತ್ತಿರ ಕಣ್ಣ ಮುಂದೆ ಕಾಣುವ ರೀತಿ ನಡೆಯುತ್ತಿದೆ. ಏನೋ ವಿನಾಶ ಕಾಲದ ಹತ್ತಿರ ಎಲ್ಲರೂ ಇದ್ದಾರೆಯೇ ಎಂದು ಅನಿಸುತ್ತಿದೆ. ಇಂತಹ ವಿಚಾರ ಘಟನೆ, ಸಾವು, ಕೊಲೆ, ಆಫಘಾತ, ಕಾಯಿಲೆ ದಿನಾಲು ನೋಡುತ್ತೇವೆ, ಆದರೂ ಇನ್ನೂ ಈ ಭೂಮಿಯಲ್ಲಿ ನಾನು ಶಾಶ್ವತ ಎನ್ನುವಷ್ಟು ವ್ಯವಹಾರ, ಜಂಭ, ನಡೆ ನುಡಿ, ಮಾತುಗಾರಿಕೆಯಲ್ಲಿ ಮಗ್ನರಾಗಿದ್ದೇವೆ.
ಯಾರೋ ತಾಯಿ ಬೆಳೆಸಿ ದೊಡ್ಡದ್ದು ಮಾಡಿ, ಬೆಳೆಸಿ, ಮದುವೆ ಮಾಡಿಸಿ ಕೊಟ್ಟ ಹೆಣ್ಣನ್ನು ಈ ರೀತಿ ಕೊಲ್ಲುವ ಹಕ್ಕು ಯಾರಿಗಾದರೂ ಇದೆಯೇ? ಎಂದು ಬೇಸರ ಪಡುವಂತೆ ಆಗಿದೆ. ಒಂದು ಕಡೆ ಯುದ್ಧ. ಯಾರು ಯಾರೋ ಅಮಾಯಕರು ಬಾಂಬ್ ಧಾಳಿಗೆ ಕಟ್ಟಡದ ಅಡಿಯಲ್ಲಿ ಅನ್ನ ನೀರಿಲ್ಲದೆ ಸಾಯುವಂತೆ ಆಗುತ್ತಿದೆ ಎಂದರೆ ಇಂತಹ ಸ್ಥಿತಿ ಯಾವತ್ತೂ ಯಾವ ದೇಶದಲ್ಲೂ ನಡೆಯದಂತೆ ಆಗಬಾರದು ಎನಿಸುತ್ತದೆ. ಕಟ್ಟಡದ ಅಡಿಯಲ್ಲಿ ಒಮ್ಮೆಲೇ ಬಿದ್ದು ಸತ್ತರೆ ತೊಂದರೆ ಇಲ್ಲ, ಆದರೆ ಸ್ವಲ್ಪ ಗ್ಯಾಪ್ ನಲ್ಲಿ ಉಳಿದು ಅನ್ನ ನೀರು ಇಲ್ಲದೇ ನರಕ ಯಾತನೆ ಪಟ್ಟು ಸಾಯುವ ಸ್ಥಿತಿ ಬರುತ್ತಿದೆ. ಇದಕ್ಕೆ ಕಾರಣ ಧರ್ಮದ ಹೆಸರು, ದೇವರು, ಪ್ರತಿಷ್ಠೆ, ಅಧಿಕಾರ, ಪ್ರದರ್ಶನ, ಸಾಮರ್ಥ್ಯದ ಪೈಪೋಟಿ ಈ ಸ್ಥಿತಿಗೆ ತಳ್ಳುತ್ತಿದೆ ಎಂದರೆ ಇದಕ್ಕೆ ನಿಜವಾದ ಪರಿಹಾರ ಏನೆಂದು ಎಲ್ಲರೂ ಯೋಚಿಸಬೇಕು. ಇದಕ್ಕೆ ಯಾರೋ ಒಬ್ಬ ನಾಯಕ ಪರಿಹಾರ ಕೊಡುತ್ತಾನೆ ಎನ್ನುವ ಭ್ರಮೆ ಇನ್ನಾದರೂ ಬಿಡಬೇಕು. ಆ ಭ್ರಮೆ ಬೇಡವೆಂದು ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತಂದಿರುವುದು. ಈ ಆಡಳಿತ ಜಾರಿಗೆ ತಾರದೇ ಇದ್ದರೆ ಖಂಡಿತ ಮುಂದೆ ಎಲ್ಲರೂ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ತನ್ನಲ್ಲಿ ಸಂಪತ್ತು ಇದೆ, ಅಧಿಕಾರ ಇದೆ, ನನಗೆ ಏನಾದ್ರೂ ಎದುರಿಸಬಲ್ಲೆ ಎನ್ನುವ ಭ್ರಮೆಯಿಂದ ಹೊರಗೆ ಬಂದು ಇಡೀ ಸಮಾಜ ತನ್ನ ಅಭಿವೃದ್ಧಿ, ತನ್ನ ಸುರಕ್ಷತೆಗೆ ಕಾರಣವಾಗಿದೆ. ಹಾಗಾಗಿ ಈ ಸಮಾಜದಲ್ಲಿ ನಡೆಯುವ ಕೆಟ್ಟ ಬದಲಾವಣೆ ತನ್ನ ಬದುಕಿಗೂ ಮಾರಕವಾಗಿದೆ ಎನ್ನುವ ಎಚ್ಚರಿಕೆ ಕೊಡುತ್ತಿದೆ ಇತ್ತೀಚಿನ ಘಟನೆಗಳು.
ಇದಕ್ಕೆ ಪರಿಹಾರವಾಗಿ ಪಾಠ ಪುಸ್ತಕದ ಓದಿಗಿಂತಲೂ ಬದುಕಿನಲ್ಲಿ ಸಮಾಜದ ಪಾತ್ರ, ಇನ್ನೊಬ್ಬರ ಜೀವ, ಮಾನವೀಯತೆ, ಅಹಿಂಸೆ, ಬದುಕಿನ ವಿಧಾನ, ಬದುಕುವ ಎಲ್ಲಾ ಪ್ರಾಣಿಗಳ ಹಕ್ಕು, ಗೌರವ ಕೊಡುವ ವಿಧಾನದ ತರಭೇತಿ ಎಲ್ಲಾರಿಗೂ ಕೊಡುವ ಅಗತ್ಯ ಇದೆ. ಇದಕ್ಕೆ ಯಾವುದೇ ಮಾರ್ಕ್,ರಾಂಕ್, ಸರ್ಟಿಫಿಕೇಟ್, ಪೈಪೋಟಿ ಬೇಡ. ಇದು ಸುಮ್ಮನೆ ಎಲ್ಲಾರ ಜೊತೆ ಬೆರೆತು ವ್ಯವಹಾರ, ಮಾತುಕತೆ, ಸಹಾಯ, ದೈನಂದಿನ ಚಟುವಟಿಕೆ ಮಾಡುವ ಅಭ್ಯಾಸ ಕಲಿಸುವ ಮುಖ್ಯ ಉದ್ದೇಶ ಹೊಂದಿರುವ ಶಿಕ್ಷಣ ಎಲ್ಲಾರಿಗೂ ಸಿಕ್ಕುವಂತೆ ಮಾಡುವ ಅಗತ್ಯ ಇದೆ. ಇದನ್ನು ಪಡೆದವರು ಮಾತ್ರ ಯಾವುದೇ ಉದ್ಯೋಗಕ್ಕೆ ಅರ್ಹರು ಎನ್ನುವಂತೆ ಆಗಬೇಕು. ಇತರ ಪಠ್ಯ ದ ಮಾರ್ಕ್ ಗಳ ಲೆಕ್ಕಾಚಾರ ಅನಂತರ ಮಾಡುವಂತೆ ಆಗಬೇಕು. ಇಲ್ಲದಿದ್ದರೆ ಮನುಷ್ಯತ್ವ ಇಲ್ಲಾದ, ಸಾಮಾನ್ಯ ವ್ಯವಹಾರ ಜ್ಜಾನ ಇಲ್ಲದಾ, ಸಂಬಂಧದ ಬೆಲೆ ಆರಿಯಾದ, ಇನ್ನೊಬ್ಬರ ನೋವು ಕಾಣದ ಸಮಾಜ ಮುಂದೆ ಬೆಳೆದು ಎಲ್ಲರ ಕಷ್ಟ, ವಿನಾಶಕ್ಕೆ ದಾರಿಯಾಗುತ್ತದೆ.