ಸ್ಟಾಂಡರ್ಡ್ ಜೀವನ ಮಾಡುವುದು ನಮ್ಮ ಕೈ ಯಲ್ಲಿ ಇದೇ
ಜೀವನ ಹೇಗೆ ನಡೆಸಬೇಕು ಎಂಬದು ನಮ್ಮ ಕೈಯಲ್ಲಿ ಇದೆ. ಕೇವಲ ಒಂದು ಓಟು ಹಾಕುವ ಮೂಲಕ ನಿಮ್ಮ ಅಭಿರುದಿ ಮತ್ತು ಜೀವನ ನಡೆಯುವುದು. ಕೇವಲ ರಾಜಕೀಯ ಸೇರಿಕೊಂಡು ಎಲ್ಲಾವನ್ನು ಸರಿ ಮಾಡುತ್ತೇನೆ ಎನ್ನುವುದು ಸುಳ್ಳು. ರಾಜಕೀಯ ಇಲ್ಲದಂತೆ ಮಾಡುತ್ತೇನೆ ಎನ್ನುವುದು ನಿಜವಾದ ದಾರಿ. ಈ ದಾರಿಯನ್ನು ತೋರಿಸಿದೆ ಪ್ರಜಾಕೀಯ.ರಾಜಕೀಯ ನಡೆಸುವ ಎಲ್ಲಾ ಪಕ್ಷಗಳು ತೋರಿಸುವ ದೇಶ ಭಕ್ತಿ, ಧರ್ಮ ಭಕ್ತಿ, ಸೇವೆ ಎಲ್ಲಾವು ಜನರನ್ನು ಮೋಸ ಮಾಡುವ ದಾರಿಯಾಗಿದೆ. ವೋಟು ಪಡೆಯುವ ತಂತ್ರಗಾರಿಕೆಯಾಗಿದೆ.ಇದರಿಂದಾಗಿ ದೇಶದ ಭದ್ರತೆಗಾಗಿ ಅತೀ ಹೆಚ್ಚು ತೆರಿಗೆ ಹಣ ವ್ಯಯ ಮಾಡುವಂತೆ ಆಗಿದೆ. ಅನವಶ್ಯಕ ರಾಜಕಾರಣಿಗಳ ರಕ್ಷಣೆಗಾಗಿ ಖರ್ಚು ಮಾಡುವಂತೆ ಆಗಿದೆ. 10% ಜನರ ವೈಭವ ನೋಡಿ 90% ಜನರು ಮಂಗಗಳಾಗುವಂತೆ ಆಗಿದೆ.
ಪ್ರತಿಯೊಬ್ಬನ ಬದುಕು ಸ್ಟ್ಯಾಂಡರ್ಡ್ ಆಗುವಂತೆ ಮಾಡಬಹುದು. ಯಾವುದೇ ಉದ್ಯೋಗ ಇರಲಿ, ಯಾವುದೇ ವಿದ್ಯಾಭ್ಯಾಸ ಪಡೆದಿರಲಿ, ಯಾವುದೇ ಜಾತಿ ಇರಲಿ ಉತ್ತಮ ಜೀವನ ಎಲ್ಲರೂ ಪಡೆಯುವಂತೆ ಮಾಡಬಹುದು. ಕೇವಲ ಮಾನವೀಯತೆ, ಅಮಾನವೀಯತೆ, ನ್ಯಾಯ, ಅನ್ಯಾಯಗಳ ನಡುವಿನ ವ್ಯತ್ಯಾಸ ಮಾತ್ರ ಉಳಿಯುವಂತೆ ಮಾಡಬಹುದು ಪ್ರಜಾಕೀಯ ಆಡಳಿತ ವ್ಯವಸ್ಥೆಯಿಂದ.
ಇಲ್ಲಿ ಒಬ್ಬ ಕೂಲಿ ಕಾರ್ಮಿಕ ಸಹ ಉತ್ತಮ ಜೀವನ ವ್ಯವಸ್ಥೆ ಪಡೆಯುವಂತೆ ಮಾಡಿ, ಕೂಲಿ ಕೆಲಸ ಸಹ ಒಂದು ಸ್ಟ್ಯಾಂಡರ್ಡ್ ಉದ್ಯೋಗವಾಗಿ ನಡೆಯುವಂತೆ ಮಾಡಬಹುದು. ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿ ಮಧ್ಯಾಪಾನದ ದುಡ್ಡಿನ ಹಣದಲ್ಲಿ ಸರಕಾರ ನಡೆಯುವಂತೆ ಮಾಡಿದ್ದಾರೆ. ದೇಶ ಭಕ್ತಿ ಎಂದು ಹೇಳಿ ದ್ವೇಷ, ಹಿಂಸೆ ಹೆಚ್ಚು ನಡೆಯುವಂತೆ ಆಗಿದೆ. ರಕ್ಷಣೆ ಎಂದು ಹೇಳಿ ಭಕ್ಷಣೆ ಮಾಡುವ ವರ್ಗ ಬೆಳೆಯುತ್ತಿದೆ.ಇದಕ್ಕೆಲ್ಲ ಶಾಶ್ವತ ಪರಿಹಾರ ಪ್ರಜಾಕೀಯ ಆಡಳಿತ ವ್ಯವಸ್ಥೆ. ಯಾವುದೇ ದುಡ್ಡು ಖರ್ಚು ಮಾಡದೇ ಚುನಾವಣೆ ನಡೆಯುವಂತೆ ಮಾಡುವುದು. ಯಾವುದೇ ಪ್ರಚಾರ ಮಾಡಿ ಕೋಟಿ ಕೋಟಿ ಸುರಿಯಾದಂತೆ ಮಾಡುವ ದಾರಿ, ಯಾವುದೇ ಮಾರುಲು ಮಾಡಿ ಜನರ ವೋಟು ಕಸಿಯುವ ವಿಧಾನ ಹೋದಾಗ ಮಾತ್ರ ಸಾಧ್ಯ...