ರಾಜ ವೋಟು ಮಾರಿಕೊಂಡು ಗುಲಾಮನಾದ
ಅಂಬೇಡ್ಕರ್ ಅವರು ಸಂವಿಧಾನ ಹೇಳುವ ಪ್ರಕಾರ ಪ್ರಜೆಗಳೇ ರಾಜರು ಎಂದು ಹೇಳಿದ್ದಾರೆ ಅದನ್ನು ವೋಟು ಎಂಬ ಅಧಿಕಾರದ ಮೂಲಕ ಸಾಬೀತು ಪಡಿಸುವ ಅವಕಾಶ ರಾಜನಿಗೆ ಇದೆ ಆದರೆ ಇಂದಿನ ಪ್ರಜೆಗಳು ತಮ್ಮ ಅಧಿಕಾರವನ್ನು 500 ರೂಪಾಯಿ ಸಾವಿರ ರೂಪಾಯಿಗೆ ಮಾರಿಕೊಂಡ ನಂತರ ಗುಲಾಮರಾಗುತ್ತಾರೆ. ಒಂದು ಮಂತ್ರಿಯ ಕೈಗೆ ಅಥವಾ MLA, ಎಂಪಿ ಗಳ ಕೈಗೆ ಕೊಡುವುದು ನಿಜವಾದ ಪ್ರಜಾಪ್ರಭುತ್ವ ಆಡಳಿತ ಆಗುವುದಿಲ್ಲ, ಕೆಲಸವನ್ನು ಮಾತ್ರ ಕೊಟ್ಟು ಅಧಿಕಾರವನ್ನು ಪ್ರಜೆಗಳು ಇಟ್ಟುಕೊಂಡರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ಆಡಳಿತವಾಗಿ ನಡೆಯಲು ಸಾಧ್ಯ. ಹೇಗೆ ನಮ್ಮ ಮನೆಯ ಕೆಲಸಗಾರನಿಗೆ ನಾವೇ ಸಂಬಳ ಕೊಡುವಾಗ ಅವನ ಕೈಗೆ ಕೆಲಸ ಮಾತ್ರ ಕೊಡುತ್ತೇವೆ ಹೊರತು ಪೂರ್ತಿ ಅಧಿಕಾರ ಕೊಟ್ಟು ನಿನಗೆ ಬೇಕಾದ ರೀತಿ ಮಾಡಿಕೊಂಡು ಹೋಗು ಎಂದು ಯಾರು ಸಹ ಬಿಡುವುದಿಲ್ಲ. ಯಾಕೆಂದರೆ ಸಂಬಳ ಕೊಡುವುದು ತಾನು ದುಡಿದ ಹಣದಿಂದ ಎನ್ನುವ ಭಾವನೆ.
ಒಂದು ದೇಶ ಸಹ ನಡೆಯುವುದು ತನ್ನ ತೆರಿಗೆ ಹಣದಿಂದ, ಅದು ಸಹ ಅಷ್ಟೇ ಮುಖ್ಯ ಎನ್ನುವ ಭಾವನೆಯ ಕೊರತೆ ನಿಜವಾದ ಪ್ರಜಾಪ್ರಭುತ್ವ ತರುವಲ್ಲಿ ವಿಫಲವಾಗಿದೆ. ಈ ಭಾವನೆ ಬೆಳೆಯುವಂತೆ ಮಾಡುವುದು ಭಾರಿ ಕಷ್ಟವಾಗಿದೆ. ಏಕೆಂದರೆ ಆಡಳಿತ ಎನ್ನುವುದು 10% ಶ್ರೀಮಂತರ ನಿಯಂತ್ರಣದಲ್ಲಿ ನಡೆಯುವಂತೆ ಆಗಿದೆ. ಹಾಗಾಗಿ ಇದನ್ನು ಬಲ ಪಡಿಸಲು ಧರ್ಮ ಪ್ರೇಮ, ದೇಶ ಪ್ರೇಮ, ಒಳ್ಳೆಯತನ, ಸಾಮರ್ಥ್ಯ, ನಾಯಕ, ಸತ್ಯವಂತ, ಜಾತಿ, ಸೇವೆ ಎನ್ನುವ ವಿಚಾರ ತಂದು ತಮಗೆ ಬೇಕಾದಂತೆ ಆಟವಾಡಿಸುವ ಸ್ವತ್ತು ಎನ್ನುವಂತೆ ಆಗಿದೆ.
ಇದನ್ನು ಬದಲಾಯಿಸಲು ಪ್ರಜ್ಜಾವಂತ ಪ್ರಜೆಗಳು ಬೇಕಾಗಿದೆ. ಇಂತಹ ಜನರ ಕೊರತೆಯಿಂದ ಎಲ್ಲಾ ಸಮಸ್ಯೆಗಳು ಬಂದಿದೆ ಹೊರತು ಬೇರೆ ಯಾರು ಸಹ ಹೊಣೆಗಾರರಲ್ಲ. ಹಾಗಾಗಿ ನಮ್ಮನ್ನು ನಾವು ಪ್ರಜ್ಜಾವಂತ ಪ್ರಜೆಗಳಾಗಿ ಬದಲಾವಣೆ ಮಾಡಿಕೊಂಡು ಇನ್ನೊಬ್ಬರಿಗೆ ಈ ಸತ್ಯ ತಿಳಿಯಪಡಿಸುವುದು ಅತ್ಯಂತ ದೊಡ್ಡ ದೇಶ ಸೇವೆಯಾಗಿದೆ.