ಗ್ರಾಮಕ್ಕಿಂತ ಗಳಿಸುವುದು ಮುಖ್ಯ
ಒಂದನ್ನೊಂದು ಕಾಲದಲ್ಲಿ ಗ್ರಾಮ ಎಂದರೆ ಒಂದು ಕುಟುಂಬ ವಾಗಿತ್ತು, ಗ್ರಾಮದ ಏಳಿಗೆ ಗಾಗಿ ನಮ್ಮ ಹಿರಿಯರು ದುಡಿದಿರುವು ನಾವು ನೋಡಿದ್ದೇವೆ ನಂಬಿಕೆ ನ್ಯಾಯಾಲಯ ವಾಗಿತ್ತು. ಆದರೆ ಇಂದು ಗ್ರಾಮ ಗಳಿಗೆ ಕೋಟಿ ಕೋಟಿ ರೂಪಾಯಿ ಬಂದರೂ, ಕೆಲಸ ಮಾಡಿದ ಹಾಗೆ ಮಾಡಿ ತಮ್ಮ ಜೆಬುಗಳಿಗೆ ಇಳಿಸುವುದು ಸಾಮಾನ್ಯ ವಾಗಿದೆ. ಒಂದು ಗ್ರಾಮಕ್ಕೆ ಒಂದು ಗ್ರಾಮ ಸಮಿತಿ ಅಗತ್ಯ ಇದೆ ಯಾಕೆಂದರೆ ಅ ಗ್ರಾಮಕ್ಕೆ ಬರುವ ಅನುದಾನ ಎಷ್ಟು? ಯಾವ ಉದ್ದೇಶಕ್ಕೆ ಖರ್ಚು ಆಗುತ್ತಿದೆ, ಯಾವುದು ಹೆಚ್ಚು ಪ್ರಾಮುಖ್ಯತೆ, ಒಟ್ಟು ಖರ್ಚು, ಉಳಿಕೆ ಬಗ್ಗೆ ತಿಳಿದು ಚರ್ಚೆ ಮಾಡಿ, ಗ್ರಾಮದ ಉದ್ದಾರದಲ್ಲಿ ಪಕ್ಷ ಭೇದ, ಧರ್ಮ ಭೇದ, ಜಾತಿ ಭೇದ ಇಲ್ಲದೆ ಸ್ಥಾನ ಮಾನದ ಲೆಕ್ಕ ಇಲ್ಲದೆ ಕೇವಲ ನಮ್ಮ ತೆರಿಗೆ ಮತ್ತು ಮತದಾನದ ಪ್ರಮುಖ್ಯತೆ ತಿಳಿಸುವ ಉದ್ದೇಶಕ್ಕಾಗಿ ಮಾಡಬೇಕು.
ಇದರ ಮುಖಾಂತರ ನಿಜವಾದ ದೇಶದ ಅಭಿವೃದ್ಧಿ ಯಲ್ಲಿ ಪಾಲ್ಗೊಂಲಲ್ಲು ಅವಕಾಶ ದೊರೆಯುವಂತೆ ಮಾಡುವುದು.ಇಂದು ನಡೆಯುತ್ತಿರುವ ರಾಜಕೀಯ ಆಡಳಿತ ವಿಧಾನದಲ್ಲಿ ಜನರಿಗೆ ಪಾಲ್ಗೊಂಲಲ್ಲು ಅವಕಾಶ ಇಲ್ಲ. ತಿಂಗಳು ಅಥವಾ ಎರಡು ತಿಂಗಳ ಮೀಟಿಂಗ್, RTI ಮುಖಾಂತರ ತಿಳಿಯಬೇಕಿದೆ. ಆದರೆ ಮುಕ್ತವಾಗಿ ಪಾಲ್ಗೊಂಡು ಗ್ರಾಮದ ನಿಜವಾದ ಅಭಿವೃದ್ಧಿಯಲ್ಲಿ ಎಲ್ಲಾರೂ ಪಾಲ್ಗೊಂಲ್ಲುವ ಯಾವುದೇ ಅವಕಾಶ ಇಲ್ಲ. ಇದಕ್ಕೆ ವಿದ್ಯೆ, ಸಮಯ, ಸ್ಥಳ ಬೇಕಾಗಿಲ್ಲ ನಿರಂತರ ಒಂದು ಗುಂಪು ಮಾಡಿಕೊಂಡು ಗ್ರಾಮದ ಅಭಿವೃದ್ಧಿಯ ಚಿಂತನೆ ಮಾಡುವ ಉದ್ದೇಶ ಹೊಂದಿರುತ್ತದೆ.
ಇದನ್ನು ಪ್ರತಿ ಗ್ರಾಮ ಹಂತದಲ್ಲಿ ಮಾಡಿ ಗ್ರಾಮದ ರಕ್ಷಣೆ, ಸ್ವಚ್ಛತೆ, ಅವ್ಯವಹಾರ, ಶಿಕ್ಷಣ, ಆರೋಗ್ಯ, ಸಾರಿಗೆ, ನೀರು, ವಿದ್ಯುತ್, ವ್ಯಾಪಾರ ಮುಂತಾದ ವ್ಯವಸ್ಥೆ ಬಗ್ಗೆ ಉತ್ತಮ ಪಡಿಸಲು ಜನರ ಅಭಿಪ್ರಾಯ, ಜನರ ಭಾಗವಹಿಸುವಿಕೆ ಇಡೀ ಗ್ರಾಮವನ್ನು ಉತ್ತಮ ಪಡಿಸಲು ಪ್ರಜಾಪ್ರಭುತ್ವ ದೇಶದಲ್ಲಿ ಅತೀ ಅಗತ್ಯವಾಗಿ ಬೇಕಾಗಿದೆ. ಇದನ್ನು ಮಾಡುವ ಉದ್ದೇಶ ಹೊಂದಿರುವ ಗುಂಪು ದೇಶದ ನಿಜವಾದ ಅಭಿವೃದ್ಧಿಗೆ ಕೊಡುಗೆ ಕೊಟ್ಟಂತೆ ಆಗುತ್ತದೆ.ಗ್ರಾಮದ ವಿದ್ಯುತ್ ಸಮಸ್ಯೆ ಉತ್ತಮ ಪಡಿಸಲು ಲೈನ್ ಮ್ಯಾನ್ ಗಳೊಂದಿಗೆ ಸಂಪರ್ಕ ಸಾಧಿಸುವುದು, ಸಾರಿಗೆ ಉತ್ತಮ ಪಡಿಸಲು ಡ್ರೈವರ್ ಗಳ ಜೊತೆ ಸಂಪರ್ಕ, ನೀರು ಸರಬರಾಜು ಉತ್ತಮ ಪಡಿಸಲು ಅವರ ಜೊತೆ ಸಂಪರ್ಕ, ಉತ್ತಮ ವಿದ್ಯೆ, ಆರೋಗ್ಯಕ್ಕಾಗಿ ಇರುವ ಸೌಲಭ್ಯಅನ್ಯಾಯ, ಮೋಸ, ವಂಚನೆ ಬಗ್ಗೆ ಜಾಗೃತಿ ಇತ್ಯಾದಿ ವಿಚಾರಕ್ಕೆ ಈ ಸಮಿತಿ ಇರುವಂತೆ ಮಾಡಿ ನಿಜವಾದ ಗ್ರಾಮದ ಪ್ರಭು ತಾನು, ಇದು ಅಂಬೇಡ್ಕರ್ ಕೊಟ್ಟಿರುವ ವೋಟಿನ ಹಕ್ಕಿನ ನಿಜವಾದ ಉದ್ದೇಶ ಎಂದು ಅರಿತು 18 ವರ್ಷ ದಾಟಿದ ಪ್ರತಿ ವ್ಯಕ್ತಿ, ಪ್ರತಿ ಮನೆ ಪಾಲ್ಗೊಂಲ್ಲುವಂತೆ ಮಾಡಬೇಕು.
ಇದು ಪ್ರತಿ ಗ್ರಾಮ ಹಂತದಲ್ಲಿ ಮಾಡಿದಾಗ ದೇಶದ ಉದ್ದಾರ, ದೇಶದ ರಕ್ಷಣೆ, ದೇಶದ ಆಡಳಿತ ಉತ್ತಮವಾಗುತ್ತದೆ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳು ಆಡಳಿತದಲ್ಲಿ ಪಾಲ್ಗೊಂಲ್ಲುವಂತೆ ಮಾಡುವುದು ನಿಜವಾದ ಪ್ರಜಾಪ್ರಭುತ್ವ ದಾರಿ ಹೊರತು ಕೇವಲ ವೋಟು ಹಾಕಿ, ನಾಯಕನಿಗೆ ಜೈ, ಪಕ್ಷಕ್ಕೆ ಜೈ ಎಂದು ತನ್ನತನಕ್ಕೆ ಬೆಲೆ ಇಲ್ಲಾಂದoತೆ ಮಾಡಿ ಗುಲಾಮ ಪದ್ಧತಿ ಮುಂದುವರಿಯುವಂತೆ ಮಾಡಿರುವ ರಾಜಕೀಯ ಹೋಗಬೇಕಿದೆ.