ಕನ್ನಡದ ಬಡಮಕ್ಕಳಿಗೆ ದಾರಿ ದೀಪ
ಹಳ್ಳಿಯಲ್ಲಿ ಕನ್ನಡದ ಶಾಲೆಗೆ ಹೋಗುವ ಮಕ್ಕಳು ಎಂದರೆ ಕೇವಲ ರೈತರ, ಕೂಲಿ ಕಾರ್ಮಿಕರ ಮಕ್ಕಳು ಮಾತ್ರಾ ಆದರೆ ನಮ್ಮ ಹಳ್ಳಿಯ ಶಾಲೆ ಗಳ ದುರಸ್ತು ಸ್ತಿತಿಯಲ್ಲಿ ಇರುವದನ್ನು ಎಲ್ಲರಿಗೂ ಗೊತ್ತಿರುವ ಸುದ್ದಿ, ಗೊತ್ತಿದ್ದರೂ ಕೊಳಕು ಮನಸಿನ ಜನರು ತಲೆ ಕೆಡಿಸಿಕೊಳ್ಳುತ್ತಿಲ್ಲ ಜಾತಿ, ದುಡ್ಡಿಗೆ ತಮ್ಮ ಮತವನ್ನು ಮಾರಿ ಬಿಡುತ್ತಾರೆ. ಸಣ್ಣ ಮಕ್ಕಳ ಬಗ್ಗೆ ಸ್ವಲ್ಪವಾದರೂ ವಿಚಾರ ಮಾಡಲೇ ಬೇಕು ಅವರಿಗೆ ಸರಿಯಾದ ಶಿಕ್ಷಣ, ಸ್ವಚ್ವ ವಾಗಿರುವ ಶಾಲೆ, ಆಟವಾಡಲು ಮೈದಾನ ಇವೆಲ್ಲವೂ ಸರಿಯಾಗಿದ್ದರೆ ಹಳ್ಳಿಯ ಮಕ್ಕಳು ಕೂಡ ಸ್ವಲ್ಪ ಮೇಲೆ ಬರಲು ಸಾದ್ಯ ವಾಗುತ್ತೆ. ಇಂದಿನ ವಿದ್ಯಾವಂತ ಜನರು ಕೇವಲ ತಮ್ಮ ಶೋಕಿ, ರೀಲ್ ಗಳನ್ನು ಮಾಡುತ್ತಾ ಸಾಮಾಜಿಕ ಜಾಲ ತಾಣದಲ್ಲಿ ಕಾಲ ಹಗರಣ ಮಾಡುವರನ್ನು ಜನರು ಲೈಕ್ ಕಾಮೆಂಟ್ ಹಾಕಿ ದೊಡ್ಡ ಸಾದನೆ ಮಾಡುತ್ತಿದ್ದಾರೆ ಎಂದರೆ ತಪ್ಪಗಲಾರದೆ?.
ಕನ್ನಡ ಹಳ್ಳಿ ಮಕ್ಕಳಿಗೆ ಆಸರೆ ಆಗುತ್ತಿರುವ ಅಕ್ಕ ಅನು ತಮ್ಮ ಕೈಲಾದ ಶಾಲೆಗೆ ಬಣ್ಣ ಸುಣ್ಣ ಸ್ವಚ್ತೆ ಮಾಡಿ ಬಡಮಕ್ಕಳ ತಾಯಿ ಎಂದರೆ ತಪ್ಪಗಲಾರದ. ಹಳ್ಳಿ ಬಡ ರೈತನ ಮಗಳಾದ ಅನು ತನ್ನ ಓದಿನ ನಂತರ ಸಹೋದರ ತಂಡ ಕಟ್ಟಿ ಕೊಂಡು ಹಳ್ಳಿ ಹಳ್ಳಿ ಸುತ್ತಿ ತಮ್ಮ ಕಾರ್ಯವನ್ನು ಮುಂದುವರೆದ ತಾಯಿಗೆ ನಮ್ಮ ಬೆಂಬಲ ನೀಡುವುದು ಅವಶ್ಯಕ. ನಿಮ್ಮ ಹಳ್ಳಿಗೆ ಬಂದಾಗ ಅವರಿಗೆ ಸರಿಯಾದ ಸಹಕಾರ ನೀಡಿ ಪ್ರೋತ್ಸಾಹಿಸಿ ಪ್ರತಿ ಊರಲ್ಲೂ ಇಂತ ಯುವಕ ಯುವತಿಯರು ಇದ್ದರೆ ನಮ್ಮ ಹಳ್ಳಿ ಗಳು ಸ್ವಚ್ ಮತ್ತು ಮಕ್ಕಳ ಆರೋಗ್ಯ , ಭವಿಷ್ಯ ಸುಧಾರಣೆಗೆ ದಾರಿ ದೀಪ ವಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತವರಿಗೆ ಹೆಚ್ಚು ಪ್ರೋತ್ಸಾಹಿಸಿ.