ಎಲ್ಲಾರ ಚಿಂತನೆಗೆ ಅವಕಾಶ ಕೊಟ್ಟಿರುವುದು ಪ್ರಜಾಪ್ರಭುತ್ವ
ಹಸಿದವನಿಗೆ ತನ್ನ ಹೊಟ್ಟೆಯ ಚಿಂತೆ, ಹಣ ಇಲ್ಲದವನಿಗೆ ಸಾಲ ಕಟ್ಟುವ ಚಿಂತೆ, ಆರೋಗ್ಯ ಸರಿ ಇಲ್ಲದೆ ಒದ್ದಾಡುವವನಿಗೆ ಆರೋಗ್ಯದ ಚಿಂತೆ, ಮನೆ ಇಲ್ಲದವನಿಗೆ ಮನೆಗಾಗಿ ಚಿಂತೆ,ಹಲವು ಚಿಂತೆಯಲ್ಲಿ ಇರುವ ಮನುಷ್ಯನಿಗೆ ಪ್ರತಿಷ್ಠೆ, ಗೌರವದ ಚಿಂತೆ. ಹಲವು ಚಿಂತೆಯಲ್ಲಿ ಯಾವುದು ಮುಖ್ಯ, ಯಾವುದು ಕಡಿಮೆ ಎಂದು ಅಳತೆ ಮಾಡುವ ಚಿಂತೆ ಇರಬೇಕು.
ಈ ಚಿಂತೆಗೆ ಕಾರಣ ಚಿಂತೆ ಮಾಡುವಲ್ಲಿ ಚಿಂತನೆ ಮಾಡದೇ ವೋಟು ಹಾಕಿರುವುದು ಕಾರಣ.
ಚಿಂತನೆ ಮಾಡಲು ಯಾವುದೇ ವಿದ್ಯೆ, ಯಾವುದೇ ಭಾಷಣ, ಯಾವುದೇ ಗ್ರಂಥ ಬೇಕಾಗಿಲ್ಲ. ಚಿಂತನೆ ಮಾಡುವ ಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಈ ಪ್ರಬಲ ಶಕ್ತಿಯನ್ನು ಅರಿಯಾದಿರಿರುವುದು ಎಲ್ಲಾ ಚಿಂತೆಗೆ ಕಾರಣ.ಎಲ್ಲರ ಚಿಂತನೆ ಸೇರಿ ನಡೆಯುವಂತೆ ಮಾಡುವುದು ದೇಶದ ಅಭಿವೃದ್ಧಿ, ತನ್ನ ಅಭಿವೃದ್ಧಿ. ಈ ಎಲ್ಲಾರ ಚಿಂತನೆಗೆ ಅವಕಾಶ ಕೊಟ್ಟಿರುವುದು ಪ್ರಜಾಪ್ರಭುತ್ವ ಆಡಳಿತ. ಇದನ್ನು ಪಡೆಯುವುದು ಹೇಗೆ ಎನ್ನುವ ಚಿಂತನೆ ಮಾಡುವ ಅಗತ್ಯ ಇದೆ. ಚಿಂತನೆ ಮಾಡದೇ ಇನ್ನೊಬ್ಬರ ಮಾತನ್ನು ನೇರವಾಗಿ ಸ್ವೀಕಾರ ಮಾಡುವ ಗುಲಾಮ ಮನಸ್ಥಿತಿ ಚಿಂತನೆ ಮಾಡದಂತೆ ಮಾಡಿ ರಾಜಕೀಯ ನಡೆಯುವಂತೆ ಮಾಡಿ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ. ಈ ಸಮಸ್ಯೆಗಳನ್ನೆಲ್ಲ ಮೆಟ್ಟಿ ನಿಲ್ಲಲು ಚಿಂತನೆ ಮಾಡಿ ನಿರ್ಧಾರ ಮಾಡುವ ಬುದ್ಧಿ ಬಹಳ ಮುಖ್ಯ. ಇನ್ನೊಬ್ಬರು ಬರೆದ ಗ್ರಂಥ ಓದಿ, ಇನ್ನೊಬ್ಬರ ಭಾಷಣ, ಸಿನಿಮಾ, ನಾಟಕ ನೋಡಿ ಆಗುವ ಚಿಂತನೆಗಿಂತ ನಮ್ಮೊಳಗಿನ ಚಿಂತನೆ ಸತ್ಯವಾಗಿರುತ್ತದೆ, ಹೆಚ್ಚು ಪರಿಣಾಮ ಬೀರುತ್ತದೆ.
ಎಲ್ಲಾರ ಚಿಂತನೆಗೆ ಅವಕಾಶ ಕೊಟ್ಟಿರುವುದು ಪ್ರಜಾಪ್ರಭುತ್ವದ ಆಡಳಿತ ವಿಧಾನ ಮಾತ್ರ. ಎಲ್ಲರ ಚಿಂತನೆಗೆ ಅವಕಾಶ ನೀಡದೆ ನಡೆಯುವ ಯಾವ ಅಭಿವೃದ್ಧಿಯು ನಿಜವಾದ ಎಲ್ಲಾರ ಅಭಿವೃದ್ಧಿ ಬಯಸುವ ಕಾರ್ಯ ಆಗಿರುವುದಿಲ್ಲ. ಎಲ್ಲರ ಅಭಿವೃದ್ಧಿ, ಎಲ್ಲರ ಹಸಿವು, ಎಲ್ಲರ ನೋವು, ಎಲ್ಲರ ನಲಿವು ಬಯಸುವ ಎಲ್ಲಾರ ಚಿಂತನೆ ಪ್ರಜಾಪ್ರಭುತ್ವ ದೇಶದಲ್ಲಿ ಬಹಳ ಮುಖ್ಯ.ಇದಕ್ಕೆ ಯಾವುದೇ ವಿದ್ಯೆ, ಯಾವುದೇ ಜಾತಿ, ಯಾವುದೇ ಧರ್ಮ, ಶ್ರೀಮಂತ, ಬಡವ, ಸಮರ್ಥ ಎನ್ನುವ ಆಳತೆ ಇರುವುದಿಲ್ಲ. ಇದು ಎಲ್ಲರಲ್ಲಿ ಇರುವ ದೊಡ್ಡ ಶಕ್ತಿ.ಈ ಶಕ್ತಿ ಒಂದು ಸೇರಿದಾಗ ಗೊತ್ತಾಗುವುದು ಪ್ರಜಾಪ್ರಭುತ್ವದ ನಿಜವಾದ ಶಕ್ತಿ.