ಕೂಡಿ ನಡೆಸುತ್ತಿರುವ ವಿಶೇಷ ಕೂಡು ಕುಟುಂಬದ ನರ್ಸರಿ.
ಅಣ್ಣ ತಮ್ಮಂದಿರೇ ಕೂಡಿ ಇರದ ಈಗಿನ ಕಾಲದಲ್ಲಿ ಅಕ್ಕ ಭಾವಂದಿರು ಕೂಡಿ ನಡೆಸುತ್ತಿರುವ ವಿಶೇಷ ಕೂಡು ಕುಟುಂಬದ ನರ್ಸರಿ.
ಇದು "ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ"
ಹೆಸರಿಗೆ ತಕ್ಕ ಹಾಗೆ ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ ಎಂದರೆ ಕರ್ನಾಟಕದಲ್ಲಿ ಒಂದು ವಿಶೇಷ ಹೆಸರನ್ನು ಹೊಂದಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಎನ್ನುವ ಗ್ರಾಮದಲ್ಲಿ 5 ಏಕರೆಯನ್ನ ಬಾಡಿಗೆ ಪಡೆದು ನರ್ಶರಿಯನ್ನ ನಡೆಸುತ್ತಿದ್ದಾರೆ ಶಿಸ್ತು ಮತ್ತು ಶ್ರದ್ದೆಯಿಂದ ಉತ್ತಮ ಗುಣಮಟ್ಟದ ಕಬ್ಬಿನ ಸಸಿಗಳು ತಯಾರಿಸುವಲ್ಲಿ ಪ್ರಸಿದ್ಧಿ ಹೊಂದಿದೆ.
ಕೇವಲ ಸಸಿ ತಯಾರಿಸಿ ಕೊಡುವುದಲ್ಲದೆ ಕಬ್ಬು ನಾಟಿಯಿಂದ ಹಿಡಿದು ಬೆಳೆ ಕಟಾವು ಆಗುವವರೆಗೂ ಸಂಪೂರ್ಣ ಮಾಹಿತಿ ನೀಡುವುದು ಈ ನರ್ಸರಿಯ ವಿಶೇಷತೆ.
ಈಗಿನ ಕಾಲದಲ್ಲಿ ಅಣ್ಣ ತಮ್ಮಂದಿರು ಕೂಡಿ ಇರುವುದೇ ಕಷ್ಟ ಅದರೆ ಇಲ್ಲಿ ನಾಲ್ಕು ಜನ ಅಕ್ಕಂದಿರು ಭಾವನವರು ಅವರ ಮಕ್ಕಳು ಸುಮಾರು 15 ರಿಂದ 20 ಜನ ಮನೆಯವರೇ ಸೇರಿಕೊಂಡು ಒಬ್ಬೊಬ್ಬರು ಒಂದೊಂದು ಜವಾಬ್ಧಾರಿಯನ್ನು ತೆಗೆದುಕೊಂಡು ಅಚ್ಚುಕಟ್ಟಾಗಿ ಕಬ್ಬಿನ ನರ್ಸರಿಯನ್ನ ನಡೆಸಿಕೊಂಡು ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಹಲವಾರು ಪ್ರಸಿದ್ಧ ನರ್ಸರಿಗಳು ಕರ್ನಾಟಕದಲ್ಲಿವೆ ಆದರೆ ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ ಅದರಲ್ಲಿಯೇ ಭಿನ್ನವಾಗಿದೆ ಈ ನರ್ಸರಿಯಲ್ಲಿ ಕೆಲಸ ಮಾಡುವವರೆಲ್ಲ ಉತ್ತಮ ವಿದ್ಯಾವಂತರು.
ಕಬ್ಬಿನ ತಳಿಗಳ ಬಗ್ಗೆ ಸಂಪೂರ್ಣ ಅಭ್ಯಾಸ ಮಾಡಿ ಅದನ್ನ ಪ್ರಯೋಗ ಮಾಡಿ ಅದರ ಆಗು ಹೋಗುಗಳನ್ನ ತಿಳಿದುಕೊಂಡು ಯಾವ ವಾತಾವರಣಕ್ಕೆ ಮತ್ತು ಯಾವ ಮಣ್ಣಿಗೆ ಯಾವ ತಳಿ ಸೂಕ್ತವಾದದ್ದೋ ಅಂತಹ ಸಸಿಗಳ ಬಗ್ಗೆ ಮಾಹಿತಿ ನೀಡಿ ರೈತರಿಗೆ ಕೊಡುತ್ತಾರೆ.
ಇವರದ್ದೇ ಸ್ವತ ವಾಹನಗಳಿದ್ದು ರೈತರ ಹೊಲಕ್ಕೆ ನೇರವಾಗಿ ಕಬ್ಬಿನ ಸಸಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇವರು ಸಸಿಗಳು ವೈಜ್ಞಾನಿಕ ರೀತಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ಇರುವುದರಿಂದ ಪ್ರತಿ ಸಕ್ಕರೆ ಕಾರ್ಖಾನೆಯವರು ಇವರ ಸಸಿಗಳನ್ನೇ ರೈತರಿಗೆ ಶಿಫಾರಸ್ಸು ಮಾಡುತ್ತಾರೆ.
ಈ ರೀತಿ ಕುಟುಂಬದವರೆಲ್ಲ ಸೇರಿಕೊಂಡು ಒಂದು ಉತ್ತಮವಾದ ನರ್ಸರಿ ನಡೆಸುತ್ತಿರುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ.
ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ, ಶೇಗುಣಶಿ
ತಾ. ಬಬಲೇಶ್ವರ, ಜಿ. ವಿಜಯಪುರ
ಮೊ. 8660190475, 8095551369