ಬಾಯಿಯಲ್ಲಿ ನೀರೂರಿಸುವ ಮೂಲಂಗಿ ಕಾಯಿಯ ಪಲ್ಯ
ಸಾಮಾನ್ಯವಾಗಿ ಮೂಲಂಗಿ ಎಲ್ಲರಿಗೂ ತಿಳಿರುವ ಸದಾ ವಾಡಿಕೆಯಲ್ಲಿರುವ ತನ್ನದೇ ಆದಂತಹ ವಿಶೇಷತೆ ಹೊಂದಿರುವ ತರಕಾರಿ.
ಮೂಲಂಗಿಯನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಇವೆ. ಮೂಲಂಗಿ ಗಡ್ಡೆಯ ಜೊತೆಗೆ ಅದರ ಸೊಪ್ಪು ಕೂಡ ತಿನ್ನಲು ರುಚಿಯಾಗಿ ಇರುತ್ತವೆ.
ಇದಕ್ಕಿಂತಲೂ ಅದ್ಭುತವಾಗಿ ಮೂಲಂಗಿ ಕಾಯಿಯಿಂದ ಮಾಡಿದ ಪಲ್ಯ ಇರುತ್ತದೆ ತಿನ್ನಲು ಬಲು ರುಚಿಯಾಗಿರುತ್ತದೆ.
ನಾವೆಲ್ಲ ನೋಡಿರುವ ತಿನ್ನುವ ಮೂಲಂಗಿಯು ಆ ಸಸ್ಯದ ಎಳೆಯ ಬೇರಿನ ಭಾಗವಷ್ಟೇ, ಅದನ್ನು ಕೀಳದೆಯೆ ಹಾಗೇಯೆ ಬಿಟ್ಟರೆ ಮೇಲಿನ ಸೊಪ್ಪು ಇನ್ನೂ ಬೆಳೆದು ಸ್ವಲ್ಪ ಸಾಸಿವೆಯನ್ನೇ ಹೋಲುವ ಗಿಡವಾಗುತ್ತದೆ.
ಮೇಲಿನ ಹಸಿರು ಕೊಡೆಯಂತಹಾ ಭಾಗವು ನೇರವಾಗಿ ಬೆಳೆದು ಎತ್ತರದ ಗಿಡವಾಗುತ್ತದೆ. ಆ ವೇಳೆಗೆ ನಾವು ಕಿತ್ತು ತಿನ್ನುವ ಬೇರಿನ ಭಾಗವು ಕರಗಿ ಪರಿಪೂರ್ಣ ಬೇರಾಗಿ ಪರಿವರ್ತಿತವಾಗುತ್ತದೆ. ಹೂವುಗಳು ಪರಾಗಸ್ಪರ್ಶಗೊಂಡು ಕಾಯಿಗಳಾಗುತ್ತವೆ.
ಈ ಕಾಯಿಗಳನ್ನು ನಾವು ಚವಳೆ ಕಾಯಿ ಪಲ್ಯ ಅಥವಾ ಅವರೆ ಕಾಯಿ ಪಲ್ಯದ ಹಾಗೆ ತಯಾರಿಸಿದರೆ ರೊಟ್ಟಿಯ ಜೊತೆಗೆ ತಿನ್ನಲು ಬಲು ಹಿತವಾಗಿರುತ್ತದೆ.
ದಯವಿಟ್ಟು ಈ ಮೂಲಂಗಿ ಕಾಯಿ ಪಲ್ಯ ತಿಂದವರು ಇದನ್ನ ತಯಾರಿಸುವ ವಿಶೇಷ ವಿಧಾನಗಳನ್ನು ತಿಳಿಸಿ