ಮಹಿಳಾ ಸಾದನೆ
ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮೊಬೈಲ್ಬ ಮತ್ತು ಟಿವಿ ನೋಡುತ್ತಾ ಕಾಲ ಹಗರಣ ಮಾಡುವರ ಮಧ್ಯೆ ಸಾಧಿಸುವ ಮಾನಸಿನಿಂದ ಬದುಕಿನ ಹಾದಿಯಲ್ಲಿನ ಏಳು ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ನಾಲ್ಕಾರು ಮಂದಿಯ ಬಾಳಿಗೆ ಆಸರೆಯಾಗಿ ನಿಂತಿರುವ ಮಹಿಳಾ ಸಾಧಕಿ ಕಥೆ.
ನಮ್ಮ ಓದಿನ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ ನಿರುದ್ಯೋಗಿ ಇದ್ದೇವೆ ನಾವು ಜೀವನದಲ್ಲಿ ಸೋತಿದ್ದೇವೆ ನಮ್ಮ ಕೈಲಿ ಎನು ಆಗಲ್ಲ ಎನ್ನುವವರ ಮಧ್ಯೆ ಕೆಲಸ ಮಾಡಲು ವಿದ್ಯೆಯೇ ಪ್ರಮುಖ ಅಲ್ಲ!!! ದೃಡ ಮನಸ್ಸು ಕಠಿಣ ಪರಿಶ್ರಮ ಇದ್ದರೇ ಎನು ಬೇಕಾದರೂ ಸಾಧನೆ ಮಾಡಬಹುದು ಸುಖದಿಂದ ಎರಡು ಹೊತ್ತು ತಾನು ಊಂಡು ಇನ್ನೊಬ್ಬರಿಗೂ ಆಸರೆಯಾಗಬಹುದು ಎಂದು ತೋರಿಸಿಕೊಟ್ಟ ಸಹೋದರಿ ನಮ್ಮ ಅನ್ನಪೂರ್ಣ ಅಕ್ಕನವರು.
ಎಂಟು ವರ್ಷಗಳ ಹಿಂದೆ ಮನೆಯಲ್ಲಿ ಮೊದಲು ನಾಲ್ಕಾರು ಕಿಲೋ ಶೇಂಗಾ ಹಿಂಡಿ(ಕುಟ್ಟಿ) ತಯ್ಯಾರಿಸಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳು ಛಲದಿಂದ ಮುನ್ನುಗ್ಗಿ ಇಂದು ಹನ್ನೆರಡು ಜನಕ್ಕೆ ಉದ್ಯೋಗ ನೀಡಿ ನಾಡಿನ ತುಂಬಾ ತಾನು ತಯ್ಯಾರು ಮಾಡುವ ಕುರುಕುಲ ತಿಂಡಿಗಳಿಂದ ಮಾರಾಟ ಮಾಡಿ ಯಶಸ್ಸು ಆದ ಸಹೋದರಿ ಅನ್ನಪೂರ್ಣ ಅಕ್ಕ
ಸರ್ಮರ್ಥ ಗೃಹ ಉದ್ಯೋಗ ಎಂಬ ಹೆಸರಿನಲ್ಲಿ ಸಹೋದರಿ ಅನ್ನಪೂರ್ಣ ಅವರು ಎಂಟು ವರ್ಷಗಳ ಹಿಂದೆ ಶೇಂಗಾ ಹಿಂಡಿಯಿಂದ ಪ್ರಾರಂಭವಾದ ಇವರ ಚಾಟ್ಸ್ ಐಟಂ ತಯ್ಯಾರಿಕೆ ಇಂದು ಅಳ್ಳಿನ ಚೂಡಾ, ಅವಲಕ್ಕಿ ಚೂಡಾ,ಘಾಟಿ, ಮಿಕ್ಸರ್, ಸೇವು, ಚಕ್ಲಿ, ಶಂಕರಪಳ, ನಿಪ್ಪಟ್ಟು, ಖಾರಬೂಂದಿ, ಮಸಾಲೆ ಶೇಂಗಾ, ಉಪ್ಪು ಮಿಶ್ರಿತ ಶೇಂಗಾ ಸೇರಿದಂತೆ ಇಪ್ಪತ್ತಂಟು ನಮೂನೆಯ ಕುರುಕುಲ ತಿಂಡಿಗಳನ್ನು ರಡಿ ಮಾಡಿ ಮಾರಾಟ ಮಾಡುತ್ತಿದ್ದಾಳೆ ಸರ್ಮರ್ಥ ಗೃಹ ಉದ್ಯೋಗವನ್ನು ಸರ್ಮರ್ಥವಾಗಿ ಬಳಸಿಕೊಂಡು ಹೊರಟಿದ್ದಾಳೆ
ಹತ್ತುಹೆಣ್ಣುಮಕ್ಕಳಿಗೆ ಇಬ್ಬರು ಪುರುಷರಿಗೆ ಉದ್ಯೋಗ ನೀಡಿರುವ ಅನ್ನಪೂರ್ಣ ಅವರ ಕುರುಕುಲ ತಿಂಡಿಗಳನ್ನು ಕಲಬರುಗಿ ಮಹಾನಗರದ ಬೇಕರಿ, ಬಿಗ್ ಬಜಾರ್ಗಳಿಗೆ ಕೊಡುತ್ತಾರೆ ಒಂದು ಮಾರುತಿ ವ್ಯಾನ್ ಹಾಗೂ ಟಂ ಟಂ ಹೊಂದಿದ್ದಾರೆ ಕಲಬರುಗಿ ಸೀಮೆ ದಾಟಿ ಬೆಂಗಳೂರು, ದಾವಣಗೆರೆ, ಬೀದರ, ಶಿವಮೊಗ್ಗ, ಸೇರಿದಂತೆ ನಾಡು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಿಗೂ ಹೋಗುತ್ತಿವೆ ರುಚಿಕರವಾದ ಸ್ವಾದಿಷ್ಟ ಗುಣಮಟ್ಟದ ಸ್ವಚ್ಛತೆಗೆ ಆದ್ಯತೆ ಬದ್ಧತೆಯಿಂದ ತಯ್ಯಾರು ಮಾಡುವ ಇವರ ಕುರುಕುಲ ತಿಂಡಿಗಳಿಗೆ ಮಾರ್ಕೆಟ್ನಲ್ಲಿ ಜನರಿಂದ ಬಹು ಬೇಡಿಕೆ ಇದೆ.
ಹೆಣ್ಣು ಮಕ್ಕಳು ಸಮ್ಮುನ ಮನೆಯಾಗ ಕುಂತು ಟೈಮ್ ಪಾಸ್ ಮಾಡಬಾರದು ರ್ರೀ ಎನರ ಕಲಿತು ಕೆಲಸ ಮಾಡಬೇಕು ರ್ರೀ ನನಗ ಖುಷಿ ಆದರ್ರೀ ತಮ್ಮ ಇವತ್ತು ನೋಡ್ರಿ ನನ್ನಂತಹ ಹತ್ತು ಮಂದಿ ಹೆಣ್ಣು ಮಕ್ಕಳು ದುಡಿಯುತ್ತಿವಿ ಎಂದು ಹೇಳುವಾಗ ಅನ್ನಪೂರ್ಣ ಅವರ ಮುಖದಲ್ಲಿ ಧನ್ಯತೆಯ ಭಾವ ಎದ್ದು ಕಾಣುತ್ತಿತ್ತು
ಶ್ರೀಮತಿ ಅನ್ನಪೂರ್ಣ ರಾಚಣ್ಣಾ ಸಂಗಳೋಗಿ
ಶ್ರೀ ಸಮರ್ಥ ಗೃಹ ಉದ್ಯೋಗ ಕಲಬುರ್ಗಿ
ಮೊ. +91 98457 62606