ಕಾಂತರ ಕೆ ಎಲ್ ರಾಹುಲ್
RCB ವಿರುದ್ದ ಗೆಲುವನ್ನು ತಂದಕೊಟ್ಟ ಆಟಗಾರ ಯಾವ ಕ್ರಮಾಂಕದಲ್ಲೂ ಆಟವನ್ನು ಅಡಬಲ್ಲ.
ಕೆ ಎಲ್ ರಾಹುಲ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರನ್ನಾಗಿ ತಂಡಕ್ಕೆ ಆಯ್ಕೆ ಮಾಡಿದ್ದರು. ಆದರೆ ಇನ್ನೇನು ಐಪಿಎಲ್ ಆರಂಭವಾಗಲು ಹತ್ತು ದಿನಗಳಿವೆ ಎನ್ನುವಾಗ ಹ್ಯಾರಿ ಬ್ರೂಕ್ ಐಪಿಎಲ್ನಿಂದ ಹಿಂದೆ ಸರಿದರು. ಹಾಗಾಗಿ ರಾಹುಲ್ ನಾಲ್ಕನೆಯ ಕ್ರಮಾಂಕದಲ್ಲಿ ಆಡಬೇಕೆಂದು ತಂಡ, ಕೋಚ್, ಕಪ್ತಾನ ನಿರ್ಧರಿಸಿದರು. ನಾಲ್ಕನೆಯ ಕ್ರಮಾಂಕದಲ್ಲಿ ಡಿಸಿ ಪರ ಒಂದು ಮ್ಯಾಚ್ ಆಡಿದ್ರಷ್ಟೆ ರಾಹುಲ್. ನಿನ್ನೆ ಸಿಎಸ್ಕೆ ಎದುರಿನ ಪಂದ್ಯ ಆರಂಭವಾಗಲು ಇನ್ನೇನು ನಾಲ್ಕು ತಾಸು ಇರುವಾಗ ಡಿಸಿಯ ಆರಂಭಿಕ ಆಟಗಾರ ಡುಪ್ಲೆಸಿ ಆರೋಗ್ಯದ ಕಾರಣ ಆಡಲ್ಲ ಎಂದು ತಿಳಿಯಿತು. ನಾಲ್ಕನೆಯ ಕ್ರಮಾಂಕದಲ್ಲಿ ಆಡಲು ತಯಾರಾಗುತ್ತಿದ್ದ ರಾಹುಲ್ ಬಳಿ ಕೋಚ್ ಬದಾನಿ ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿಯಲು ಹೇಳಿದರು. ಸರಿ ಎಂದ ರಾಹುಲ್ ನಿನ್ನೆ ಓಪನರ್ ಆಗಿ ಬಂದು ಎಪ್ಪತ್ತು ಪ್ಲಸ್ ರನ್ನುಗಳನ್ನು ಹೊಡೆದರು. ಪಂದ್ಯಶ್ರೇಷ್ಟನೂ ಆದರು. ಆದರೆ ಮುಂದಿನ ಪಂದ್ಯದಲ್ಲಿ ಡುಪ್ಲೆಸಿ ವಾಪಾಸ್ಸಾದರೆ ರಾಹುಲ್ನನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಾರೋ!
ರಾಹುಲ್ನ ಇಡೀ ಕರಿಯರ್ ಇದೇ ಕಥೆಯಾಯಿತು. ತಂಡಕ್ಕೆ ಬೇಕಾದಾಗ, ಬೇಕಾದ ಕ್ರಮಾಂಕದಲ್ಲಿ ಆಡಿಸುತ್ತಾರೆ. ಚಾಂಪ್ಯನ್ಸ್ ಟ್ರೋಫಿಯಲ್ಲಿ ಅಕ್ಷರ್ ಪಟೇಲನನ್ನು ರಾಹುಲ್ಗಿಂತಾ ಮೊದಲು ಕಳುಹಿಸುತ್ತಿದ್ದರು. ಹೀಗೆ ನಿತ್ಯ ಆತನ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿಎ, ಒಂದೆರಡು ಮ್ಯಾಚಲ್ಲಿ ಸ್ವಲ್ಪ ಫೇಲಾದರೆ ಮತ್ತೆ ಆತನ ವಿರುದ್ಧ ಮತ್ತೆ ಮಸಲತ್ತು ಆರಂಭಿಸುತ್ತಾರೆ. ಆತನ ಮೇಲೆ ಸದಾಕಾಲ ಪ್ರೆಶ್ಶರ್ ಹಾಕಿಯೇ ಆಡಿಸುವಂತಿದೆ. ಆತ ಕ್ರಮಾಂಕ ಬದಲಾಯಿಸಲು ಒಲ್ಲೆಯೆಂದರೆ, ಒಂದು ಪಂದ್ಯದಲ್ಲಿ ಕಳಪೆ ಪರ್ಫಾಮೆನ್ಸ್ ತೋರಿಸಿದರೆ ಆತನನ್ನು ಮನೆಗೆ ಕಳುಹಿಸುವುದೂ ಗ್ಯಾರಂಟಿ. ಆತ ಫೇಲಾಗಬೇಕೆಂದೇ ಈ ರೀತಿ ಪ್ರತೀಬಾರಿ ಆತನನ್ನು ಮೇಲೆ-ಕೆಳಗೆ ಬದಾಲಾಯಿಸುತ್ತಿದ್ದಾರೆನ್ನುವಂತಿದೆ.
ಐಪಿಎಲ್ನಲ್ಲಿ ಕನಿಷ್ಟ 50+ ಪಂದ್ಯಗಳನ್ನಾಡಿದವರಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ (45.47) ಕೆ ಎಲ್ ರಾಹುಲ್ ಅವರದ್ದು. ಇಡೀ ಐಪಿಎಲ್ ದಾಖಲೆಗಳನ್ನು ತೆಗೆದುಕೊಂಡರೆ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿಯಲ್ಲಿ ರಾಹುಲ್ 5 ನೆಯ ಸ್ಥಾನದಲ್ಲಿದ್ದಾರೆ. ಅವರಿಗಿಂತ ಮೇಲಿರುವ ನಾಲ್ಕು ಮಂದಿಯಲ್ಲಿ ಇಬ್ಬರು ತಲಾ ಹತ್ತು ಪಂದ್ಯಗಳನ್ನೂ ಆಡಿಲ್ಲವಾದರೆ, ಇನ್ನಿಬ್ಬರು ತಲಾ 24 ಹಾಗೂ 29 ಪಂದ್ಯಗಳನ್ನಾಡಿರುವುದಷ್ಟೆ. ರಾಹುಲ್ 130+ ಪಂದ್ಯಗಳ ನಂತರನೂ 45+ ಸರಾಸರಿಯಲ್ಲಿ ಸ್ಕೋರ್ ಗಳಿಸುತ್ತಿದ್ದಾರೆ. ಇದರಲ್ಲಿ 38 ಬಾರಿ 50+ ಹಾಗೂ 4 ಸೆಂಚುರಿ. ಐಪಿಎಲ್ನ ಬೆಸ್ಟ್ ವಿಕೆಟ್ ಕೀಪರುಗಳಲ್ಲೂ ಟಾಪ್-10 ಲ್ಲಿದ್ದಾರೆ. ಇದಕ್ಕಿಂತಾ ಹೆಚ್ಚೇನು ಮಾಡಬಹುದು ಓರ್ವ ಆಟಗಾರ.