ಎಲ್ಲಾರಿಗೂ ಕಡ್ಡಾಯ ಉದ್ಯೋಗ ಎನ್ನುವ ಕಾಯಿದೆ ಯಾವ ಸರಕಾರ ತರಲಿಲ್ಲ.
ಎಲ್ಲಾರಿಗೂ ಕಡ್ಡಾಯ ಉದ್ಯೋಗ ಎನ್ನುವ ಕಾಯಿದೆ ಯಾವ ಸರಕಾರ ತರಲಿಲ್ಲ. ಯಾಕೆಂದರೆ ಉದ್ಯೋಗ ಪಡೆದರೆ ಅವನು ಸ್ವಾಭಿಮಾನವಾಗಿ ಬದುಕುತಾನೆ. ಇದರಿಂದ ಬೇಡಿಕೊಂಡು ಬರುವವರ ಸಂಖ್ಯೆ ಕಡಿಮೆ ಆಗುತ್ತದೆ ಎನ್ನುವ ಉದ್ದೇಶ.
ಒಂದು ದೇಶದ ಪ್ರಜೆ ಆ ದೇಶದ ಸಂಪತ್ತು ಆಗಬೇಕು ಹೊರತು ಉಗ್ರಗಾಮಿ, ಲೂಟಿಕೋರರು, ನಕ್ಸಲೇಟ್ ಮುಂತಾದವರನ್ನು ಕೊಂದು ಪರಿಹಾರ ಕಾಣುವುದಕ್ಕಿಂತ ಸರಿಯಾದ ಉದ್ಯೋಗ, ಬದುಕಲು ಸರಿಯಾದ ಸಂಬಳ ಮೊದಲು ಕೊಟ್ಟು ಎಲ್ಲಾ ಸಮಸ್ಯೆಗೆ ಪರಿಹಾರ ಕಾಣಬೇಕು ಹೊರತು ಸಮಸ್ಯೆ ಸೃಷ್ಟಿ ಮಾಡಿ ಸಮಸ್ಯೆ ಪರಿಹಾರ ಎನ್ನುವ ರಾಜಕೀಯ ನಾಟಕದಿಂದ ಏನೂ ಪ್ರಯೋಜನ ಇಲ್ಲ.ಒಬ್ಬ ಕೂಲಿ ಕಾರ್ಮಿಕ, ರಿಕ್ಷಾ ಡ್ರೈವರ್ ಸಹ ಜೀವನ ಭದ್ರತೆಯ
ಉದ್ಯೋಗ ಆಗಬೇಕು. ಕೇವಲ ಶಕ್ತಿ ಇರುವ ತನಕ ದುಡಿದು ತಿನ್ನು ಆ ನಂತರ ಬೇಡಿ ಬದುಕುವ ಜೀವನ ಆಗಬಾರದು.
ಸಮಾನವಾಗಿ ಅಧಿಕಾರ, ಸಂಪತ್ತು, ಗೌರವ, ಭೂಮಿ ಹಂಚುವ ನಿಜವಾದ ಪ್ರಜಾಪ್ರಭುತ್ವ ಆಡಳಿತ ಬರುವಂತೆ ಮಾಡುವುದು ನಿಜವಾದ ಪ್ರಜಾಪ್ರಭುತ್ವ ಸರಕಾರದ ಸಾಧನೆ ಹೊರತು ಒಂದು ಧರ್ಮದವರ ಅನ್ಯಾಯ ಕಂಟ್ರೋಲ್ ಮಾಡುತ್ತಿದ್ದೇವೆ ಎಂದು ಇನ್ನೊಂದು ಧರ್ಮದವರಿಗೆ ಖುಷಿ ಪಡಿಸುವ ಉದ್ದೇಶದ ಯಾವ ಕಾನುನಿಗಿಂತಲೂ ಯಾರದ್ದೇ ಅನ್ಯಾಯ, ಮೋಸ, ಆಕ್ರಮ, ಹಿಂಸೆ ಇದ್ದರೂ ಅದನ್ನು ಸರಿ ಮಾಡಬೇಕು. ಅನ್ಯಧರ್ಮದಿಂದ ತೊಂದರೆ ಹೋಗಲಾಡಿಸಲು ನೇರವಾಗಿ ಹೋರಾಟ ಮಾಡಿ ಸೋಲಿಸುವ ಧೈರ್ಯ ತೋರಿಸಬೇಕು. ಕೇವಲ ವೋಟಿಗಾಗಿ ಮಾಡುವ ಧರ್ಮ ಧರ್ಮಗಳ ಮದ್ಯೆ ದ್ವೇಷ ಹೆಚ್ಚಿಸುವ, ಜಾತಿ ಜಾತಿ, ಪಕ್ಷ ಪಕ್ಷಗಳ ಮುಖಾಂತರ ಒಡೆದು ಆಳುವ ನೀತಿಯಿಂದ ಶ್ರೀಮಂತರು, ಸಮರ್ಥರು ಮಾತ್ರ ಬೆಳೆಯುತ್ತಾರೆ. ಎಲ್ಲಾರನ್ನು ಬೆಳೆಸಲು ಬಂದಿರುವ ಪ್ರಜಾಪ್ರಭುತ್ವದ ಉದ್ದೇಶ ಹಿಡೇರದೆ ಸಮಾಜದಲ್ಲಿ ಶ್ರೀಮಂತ ಬಡವ ಎನ್ನುವ ವ್ಯತ್ಯಾಸದ ಅಂತರ ಬೆಳೆಯುತ್ತಾ ಹೋಗುತ್ತದೆ. ಆಡಳಿತದ ನಿಯಂತ್ರಣ ಜನರ ಕೈಯಲ್ಲಿ ಇರುವ ಬದಲು, ಕೆಲವು ವರ್ಗದ ನಿಯಂತ್ರಣದಲ್ಲಿ ನಡೆಯುವಂತೆ ಮಾಡುವ ಉದ್ದೇಶದ ರಾಜಕೀಯ ಆಡಳಿತ ಗಟ್ಟಿಯಾಗುತ್ತಾ ಹೋಗುತ್ತದೆ.