ಜನರ ಜೀವನ ಅವಶ್ಯಕತೆ ಪೂರೈಸಲು ಯಾವೆಲ್ಲ ಕೆಲಸಗಳ ಅಗತ್ಯ
ಜನರ ಜೀವನ ಅವಶ್ಯಕತೆ ಪೂರೈಸಲು ಯಾವೆಲ್ಲ ಕೆಲಸಗಳ ಅಗತ್ಯ ಇದೆ ಎಂದು ಪಟ್ಟಿ ಮಾಡುತ್ತಾ ಹೋಗಬಹುದು. ಆಹಾರ ಬೆಳೆಯುವ ರೈತ, ಅವರ ಸಹಾಯಕ್ಕೆ ಕೂಲಿ ಕಾರ್ಮಿಕ, ಆರೋಗ್ಯಕ್ಕಾಗಿ ವೈದ್ದರು, ಅವರ ಸಹಾಯಕ್ಕೆ ಸಹಾಯಕರು, ವಿದ್ಯೆಗಾಗಿ ಶಿಕ್ಷಕರು, ಅವರ ಸಹಾಯಕರು, ವಸತಿ ನಿರ್ಮಾಣಕ್ಕೆ ಅನೇಕರು,ವಸ್ತಗಳ ಖರೀದಿಗಾಗಿ ವ್ಯಾಪಾರಸ್ಥರು,ಸಾರಿಗೆಗಾಗಿ ಅನೇಕ ಸಹಾಯಕರು, ಇನ್ನೂ ರಕ್ಷಣೆಗೆ ಪೊಲೀಸ್, ಸೈನಿಕರು ಇತ್ಯಾದಿ ಇತ್ಯಾದಿ.
ಇವುಗಳಲ್ಲಿ ಯಾವುದು ಮುಖ್ಯ, ಯಾವುದು ಮುಖ್ಯ ಅಲ್ಲ ಎಂದು ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ಎಲ್ಲಾವು ಮುಖ್ಯವಾಗಿದೆ. ಎಲ್ಲರ ಅಗತ್ಯತೆ ಪೋರೈಸಲು ಮುಖ್ಯವಾಗಿದೆ. ಹಾಗಾಗಿ ಎಲ್ಲಾರ ಕೆಲಸಕ್ಕೂ ಪ್ರಾಮುಖ್ಯತೆ ಇದೆ. ಅವರವರ ಅರ್ಹತೆ ಆಧಾರದಲ್ಲಿ ವ್ಯತ್ಯಾಸ ಇದೆ. ಆದರೆ ದೈಹಿಕ ಶ್ರಮವನ್ನು ಕಡೆಗಣಿಸಲಾಗಿದೆ. ಯಾಕೆಂದರೆ ದೈಹಿಕ ಶ್ರಮದ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಬರುವ ಬಡ ವರ್ಗವನ್ನು ನಿರ್ಮಾಣ ಮಾಡುವ ಆಡಳಿತ ವ್ಯವಸ್ಥೆ ಹಿಂದಿನಿಂದಲೂ ಮಾಡಿರುವ ಕಾರಣ ರಾಜಕೀಯ ಪ್ರಬಲವಾಗಿ ಬೆಳೆಯುವಂತೆ ಮಾಡಿದೆ. ಈ ವಿಧಾನ ಮುಂದುವರಿಕೆಗಾಗಿ ಜಾತಿ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ರಾಜಕೀಯ ವರ್ಗದ ಹಿಡಿತದಲ್ಲಿ ಇರುವಂತೆ ಆಗಿದೆ.ದೈಹಿಕ ಶ್ರಮ, ಮಾನಸಿಕ ಶ್ರಮದ ಉದ್ದೇಶ ಹೊಟ್ಟೆಪಾಡು, ಹಣ ಸಂಪಾದನೆ, ಗೌರವ ಇದಕ್ಕಾಗಿ ಸೀಮಿತವಾಗಿದೆ. ಆದರೆ ಈ ವ್ಯತ್ಯಾಸ ನಿರ್ಮಾಣ ಮಾಡಿ ಆಡಳಿತ, ಅಧಿಕಾರವನ್ನು ಹತ್ತೋಟಿ ಪಡೆಯುವ ಉದ್ದೇಶ ಹೊಂದಿರುವ 10% ವರ್ಗದ ಆಟವನ್ನು ನಿಲ್ಲಿಸಲು ಪ್ರಜಾಪ್ರಭುತ್ವ ಆಡಳಿತ ಜಾರಿಗೆ ಬರುವಂತೆ ಮಾಡಿದರು. ಆದರೆ ಅದನ್ನು ಸಹ ತಮಗೆ ಬೇಕಾದಂತೆ ಉಪಯೋಗಿಸುವ ಬುದ್ದಿವಂತಿಕೆ ಅರ್ಥವಾಗದಂತೆ ಮಾಡಿ ಇನ್ನೂ ಸಹ ಈ ವ್ಯತ್ಯಾಸ ಕಾಪಾಡಿಕೊಂಡು ಬರುವಲ್ಲಿ ಯಶಸ್ಸು ಆಗಿದೆ.