ಕರ್ನಾಟಕ ದಷ್ಟು ಚಿಕ್ಕ ದೇಶ ಇಸ್ರೇಲ್ ಅಭಿರುದ್ದಿ ನೋಡಿ
ಇಸ್ರೇಲ್ ಒಂದು ಸಣ್ಣ ರಾಷ್ಟ್ರ. ಕರ್ನಾಟಕದಷ್ಟು ವಿಸ್ತೀರ್ಣ ಹೊಂದಿರಬಹುದು. ಆದರೆ ಅಷ್ಟು ಬಲಿಷ್ಠವಾಗಿ ಬೆಳೆದದ್ದು ಹೇಗೆ? ಅಲ್ಲಿಯ ಪ್ರಧಾನಿ ನೆತ್ಯಾವು ಅವರು ಒಬ್ಬರು ಕಾರಣವೇ? ಎಂದು ಆ ರಾಷ್ಟ್ರವನ್ನು ಹೊಗಳುವ ಮೊದಲು ತಿಳಿಯಬೇಕಾದ ಅಗತ್ಯ ಇದೆ.
ಅವರ ಕೃಷಿ ಪದ್ಧತಿ, ತಂತ್ರಜ್ಜಾನ, ಒಗ್ಗಟ್ಟು, ವಿದ್ಯೆ, ಜೀವನ ವ್ಯವಸ್ಥೆ, ಸ್ವಾಭಿಮಾನ ಎಲ್ಲಾ ಕ್ಷೇತ್ರದಲ್ಲಿಯೂ ಗುಣಮಟ್ಟ ಬಹಳ ಉತ್ತಮವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರನ್ನು ಅವಲಂಬಿಸಿ ಒಂದು ದೇಶ, ದೇಶದ ಜವಾಬ್ದಾರಿ, ದೇಶದ ಗೌರವ, ದೇಶದ ರಕ್ಷಣೆ, ದೇಶದ ಸಂಪತ್ತು ಆಗುವಂತೆ ಮಾಡಿರುವುದು ಕಾರಣ. ಒಬ್ಬ ಪ್ರಧಾನಿಯನ್ನು ಮಾತ್ರ ಶ್ರೇಷ್ಠ ಎಂದು ಬಿಂಬಿಸಲಿಲ್ಲ, ಪ್ರತಿ ಪ್ರಜೆಯೂ ಒಂದು ದೇಶದ ಅಭಿವೃದ್ಧಿಯ ಪಾತ್ರ ವಹಿಸಿಕೊಂಡಿರುವಂತೆ ಮಾಡಿರುವುದು ಮುಖ್ಯ ಕಾರಣ.
ಆದರೆ ನಮ್ಮಲ್ಲಿ ಅವರನ್ನು ಹೊಗಳಿ ರಾಜಕೀಯ ಲಾಭ ಪಡೆಯುವವರು ಇದ್ದಾರೆ. ಒಬ್ಬರಿಂದಲ್ಲೇ ದೇಶಉದ್ದಾರ, ಒಬ್ಬರೇ ಶ್ರೇಷ್ಠ, ಒಬ್ಬರಿಂದ ಮಾತ್ರ ಸಾಧ್ಯ ಎಂದು ವೋಟು ಪಡೆಯುವ ತಂತ್ರಗಾರಿಕೆ ನಡೆಯುತ್ತದೆ ಹೊರತು ದೇಶದ ನಿಜವಾದ ಅಭಿವೃದ್ಧಿ ಎಂದರೆ ಏನು? ಪ್ರತಿಯೊಬ್ಬನ ಪಾತ್ರ, ಜವಾಬ್ದಾರಿಯನ್ನು ಕೊಡದೇ, ಕೆಲವರ ಹಿಡಿತದಲ್ಲಿ ದೇಶದ ವ್ಯವಸ್ಥೆ, ದೇಶದ ಸಂಪತ್ತು, ದೇಶದ ಭೂಮಿ, ದೇಶದ ಅಧಿಕಾರ, ದೇಶದ ಜವಾಬ್ದಾರಿ ಇರುವಂತೆ ಮಾಡುವುದಕ್ಕೆ ಜಾತಿ, ಧರ್ಮ, ದೇಶ ಭಕ್ತಿ, ಒಳ್ಳೆಯತನ, ಸಂಸ್ಕೃತಿ ಎನ್ನುವ ವಿಚಾರ ತಂದು ವೋಟು ಪಡೆಯುವ ರಾಜಕೀಯ ತಂತ್ರಗಾರಿಕೆ ನಿರಂತರವಾಗಿ ನಡೆಯುವಂತೆ ಮಾಡುವ 10% ವರ್ಗದ ಬಗ್ಗೆ ತಿಳಿಯುವ ಅಗತ್ಯವಿದೆ.
ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಯೇ ಮುಖ್ಯ, ಪ್ರಜೆಯ ಜವಾಬ್ದಾರಿ ಮುಖ್ಯ, ಪ್ರಜೆಯ ಕೈಗೆ ಎಷ್ಟು ಅಧಿಕಾರ ಬಂದಿದೆ ಎನ್ನುವುದು ಮುಖ್ಯಇದು ನಿಜವಾದ ಪ್ರಜಾಪ್ರಭುತ್ವ ಆಡಳಿತ ತಂದು ಇಸ್ರೇಲ್ ದೇಶಕ್ಕಿಂತಲೂ ಬಲಿಷ್ಠ ಆಗುವಷ್ಟು ಸಂಪತ್ತು,ಭೂಮಿ ಹೊಂದಿದೆ. ಇದನ್ನು ಮಾಡಲು ಪ್ರತಿ ವ್ಯಕ್ತಿ ಜಾಗೃತನಾಗಬೇಕು.