ಕನಿಷ್ಠ ಬೆಂಬಲ ಬೆಲೆ ಯೋಜನೆ
ಕೃಷಿ ಮಾರಾಟ ಇಲಾಖೆ
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
ರೈತ ಬಾಂಧವರೇ,
2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕುಸುಬೆ ಖರೀದಿ ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ರಾಜ್ಯದ ಪ್ರಮುಖ ಜಿಲ್ಲೆಗಳಾದ ಬೀದರ್, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ, ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ರೂ.5,940 ರಂತೆ ಖರೀದಿಸಲಾಗುವುದು. ರೈತರು ಕುಸುಬೆ ಮಾರಾಟ ಮಾಡಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಸೂಚನೆ
ಪ್ರತಿ ಎಕರೆಗೆ 05 ಕ್ವಿಂಟಲ್ ರಂತೆ - ಗರಿಷ್ಠ 20 ಕ್ವಿಂಟಲ್ ವರೆಗೆ ಪ್ರತಿ ರೈತರಿಂದ ಖರೀದಿಸಲಾಗುವುದು.
• ರೈತರಿಂದ ಖರೀದಿಸಲಾಗುವ ಕುಸುಬೆ ಉತ್ಪನ್ನದ ಮೌಲ್ಯದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಜಮೆಗೊಳಿಸಲಾಗುವುದು.
ರೈತ ಬಾಂಧವರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ ಭ್ರೂಟ್ಸ್ ನ ಎಫ್.ಐ.ಡಿ ಸಂಖ್ಯೆ ನೀಡಿ ನೊಂದಣಿ ಮಾಡಿಕೊಂಡು ಕುಸುಬೆ ಮಾರಾಟ ಮಾಡಬಹುದಾಗಿದೆ.
• ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಸಂಖ್ಯೆ: 1800 425 1552 ಯನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಿರಿ.
ಪ್ರಕಟಣೆ : ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ.